ಒಳಮೀಸಲಾತಿಗೆ ಆಗ್ರಹಿಸಿ ತಮಟೆ ಚಳವಳಿ; ಮಾದಿಗ, ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ

14 HVR 3
Published on

ಹಾವೇರಿ: ಸುಪ್ರೀಂಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೇ ಕಾಲಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ಖಂಡಿಸಿ ಹಾಗೂ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸುವಂತೆ ಆಗ್ರಹಿಸಿ ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರ ಕಚೇರಿ ಎದುರು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ತಮಟೆ ಚಳುವಳಿ ನಡೆಸಲಾಯಿತು.

ತೀರ್ಪು ಬಂದು ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ನ್ಯಾ ನಾಗಮೋಹನ ದಾಸ್ ಆಯೋಗ ರಚಿಸಿದ್ದು, ಬಿಟ್ಟರೆ ಏಆಶನನ್ನೂ ಮಾಡಿಲ್ಲ. ಸರ್ಕಾರದ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿ ಮಾಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆ ವಿಫಲವಾಗಿದೆ. ಹೋರಾಟಕ್ಕೆ ಸಹಕಾರ ಕೊಡಬೇಕೆಂದು ಶಾಸಕರ ಸಹಾಯಕರ ಮೂಲಕ ಶಾಸಕರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ಒಕ್ಕೂಟದ ಸಂಘಟನಾ ಸಂಚಾಲಕ ಉಡಚ್ಪಪ ಮಾಳಗಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಎಂ.ಆಂಜನೇಯ, ಮಂಜಪ್ಪ ಮರೋಳ, ಕಿಟ್ಟಪ್ಪ ಕರ್ಜಗಿ, ಬಸಣ್ಣ ಮುಗಳಿ, ಅಶೋಕ ಮರೆಣ್ಣನವರ, ನೀಲಮ್ಮ ಪೂಜಾರ, ಹನಮಂತಪ್ಪ ಸಿ.ಡಿ., ಮಹೇಶಪ್ಪ ಹರಿಜನ, ಶಿವು ಮುದಿಮಲ್ಲಣ್ಣನವರ, ಚಂದ್ರಪ್ಪ ದಾಸನಕೇರಿ, ಶಂಭುಲಿಂಗಪ್ಪ ದೀವಟರ, ರಘು ಮಾಳಗಿ, ಮಹಾಂತೇಶಪ್ಪ ಚಿನ್ನಿಕಟ್ಟಿ, ಮುತ್ತಪ್ಪ ದೊಡ್ಡಮನಿ, ಅರುಣ ಭೋವಿ, ಮಂಜುನಾಥ ಸಿದ್ದಣ್ಣನವರ, ಅಶೋಕ ಅರೆಕಟ್ಟಿ, ಸುಭಾಷ ದೊಡ್ಡಮನಿ, ಮುತ್ತಣ್ಣ ಮುಷ್ಠಿ, ಗುಡ್ಡಪ್ಪ ಕನವಳ್ಳಿ, ಇಯರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net