ಆರ್‌ಎಫ್‌ಒ ಮನೆ, ಕಚೇರಿ ಸೇರಿ 10 ಕಡೆ ದಾಳಿ; ಅಕ್ರಮ ಆಸ್ತಿ ಗಳಿಕೆ ಆರೋಪ; ಲೋಕಾ ಸುಳಿಯಲ್ಲಿ ಮಹಾಂತೇಶ ನ್ಯಾಮತಿ, ಪರಮೇಶ ಪೇಲನವರ

RFO Loka Raid
Published on

ಹಾವೇರಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ತಾಲೂಕು ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ಮಹಾಂತೇಶ ನ್ಯಾಮತಿ ಹಾಗೂ ಜಲಾನಯನ ಅಭಿವೃದ್ಧಿ ಆರ್‌ಎಫ್‌ಒ ಅಧಿಕಾರಿ ಪರಮೇಶ ಪೇಲನವರ ಅವರ ಕಚೇರಿ ಹಾಗೂ ನಿವಾಸಿ ಸೇರಿ ಒಟ್ಟು 10 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಪರಮೇಶ ಪೇಲನವರಗೆ ಸೇರಿದ ಜಿಲ್ಲೆಯ 6 ಕಡೆಗಳಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ತಪಾಸಣೆ ನಡೆಸಿದ್ದಾರೆ. ಮಹಾಂತೇಶ ನ್ಯಾಮತಿಗೆ ಸೇರಿದ ಜಿಲ್ಲೆಯ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಭರ್ಜರಿ ಹಣ, ವಿದೇಶಿ ಮದ್ಯ ಪತ್ತೆ

ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆ ಪತ್ರಗಳು ಹಾಗೂ ವಿದೇಶಿ ಮದ್ಯ ಪತ್ತೆಯಾಗಿದೆ. ಎಲ್ಲವನ್ನೂ ವಶಕ್ಕೆ ಪಡೆದಿರುವ ಲೊಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪರಿಶೀಲನೆ ಬಳಿಕ ನಿರ್ದಿಷ್ಟ ಅಂಕ-ಸಂಖ್ಯೆ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net