ಲೋಡಾಯಾ ಪಿರಾಮಿಡ್‌ನಲ್ಲಿ ವಿಶ್ವ ಧ್ಯಾನ ದಿನಾಚರಣೆ ಡಿ.21ರಂದು

20 Lodaya Pyramid
Published on

ಹಾವೇರಿ: ವಿಶ್ವ ಧ್ಯಾನ ಶಿಬಿರ ದಿನಾಚರಣೆ ಅಂಗವಾಗಿ ಇಲ್ಲಿನ ಅಶ್ವಿನಿನಗರದ ಲೋಡಾಯಾ ಆಸ್ಪತ್ರೆ ಆವರಣದಲ್ಲಿರುವ ‘ಪಿರಾಮಿಡ್ ಮೆಡಿಟೇಶನ್ ಸೆಂಟರ್ ಆ್ಯಂಡ್ ಹೀಲಿಂಗ್ ಗಾರ್ಡನ್’ನಲ್ಲಿ ಡಿ.21ರಂದು ಬೆಳಗ್ಗೆ 6.30ಕ್ಕೆ ಹಾಗೂ ಸಂಜೆ 6.30ಕ್ಕೆ ಧ್ಯಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಡಾ.ಗೌತಮ ಲೋಡಾಯ ಅವರು ಧ್ಯಾನದ ಮಹತ್ವ ಹಾಗೂ ಹೇಗೆ ಧ್ಯಾನ ಮಾಡುವುದು ಎಂಬ ಕುರಿತು ತಿಳಿಸಿಕೊಡಲಿದ್ದಾರೆ.

ಹತ್ತು ವರ್ಷಗಳ ಹಿಂದೆ ನಗರದಲ್ಲಿ ಧ್ಯಾನ ಸಾಧನೆಗಾಗಿ ಪಿರಾಮಿಡ್ ಸೆಂಟರ್ ಆರಂಭಿಸಲಾಯಿತು. ಧ್ಯಾನ ಆಸಕ್ತರಿಗೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ. ವೈಜ್ಞಾನಿಕವಾಗಿ ನಿರ್ಮಿಸಿರುವ ಪಿರಾಮಿಡ್‌ನಲ್ಲಿ ಕುಳಿತು ಧ್ಯಾನ ಮಾಡುವುದರಿಂದ ಮನಸಿನ ನಿಯಂತ್ರಣ ಸಾಧ್ಯವಾಗುತ್ತದೆ. ಇದರಿಂದ ಇಡೀ ದಿನ ಸುಂದರವಾಗಿ ಇರಲಿದ್ದು, ಒತ್ತಡ ಮಾಯವಾಗುತ್ತದೆ. ಹಾಗಾಗಿ, ಧ್ಯಾನದ ಮಹತ್ವ ಅರಿತು ಪ್ರತಿಯೊಬ್ಬರೂ ಧ್ಯಾನ ಮಾಡಬೇಕು. ಆಸಕ್ತರಿಗೆ ನಮ್ಮ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲಾಗುವುದು ಎಂದು ಡಾ.ಗೌತಮ ಲೋಡಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net