

ಹಾವೇರಿ: ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಸೆ.20ರಿಂದ ಅಕ್ಟೋಬರ್ 14ರವರೆಗೆ ನಿಗಧಿತ ದಿನದಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಕುರುಬಗೊಂಡ, ಸಂಗೂರು, ಹಿರೇಲಿಂಗದಹಳ್ಳಿ, ದೇವಿಹೊಸೂರು, ಹೆರೂರು, ಹಲಗೇರಿ ಗ್ರಾಮಗಳಲ್ಲಿ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾವೇರಿ ಶಹರದಲ್ಲಿ ಸೆ.22ರ ಬೆಳಗ್ಗೆ 6ರಿಂದ ಸೆ.23ರ ಬೆಳಗ್ಗೆ 6ರವರೆಗೆ, ಸೆ.24ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ, ಸೆ.26ರ ಬೆಳಗ್ಗೆ 6ರಿಂದ ಸೆ.27ರ ಬೆಳಗ್ಗೆ 6ರವರೆಗೆ, ಸೆ.30ರ ಬೆಳಗ್ಗೆ 6ರಿಂದ ಅ.1ರ ಬೆಳಗ್ಗೆ 6ರವರೆಗೆ, ಅ.10ರ ಬೆಳಗ್ಗೆ 6ರಿಂದ ಅ.11ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.
ಹಿರೇಕೆರೂರು, ಹುಲಗೂರ, ಹಾಗೂ ಹಿರೇಹಳ್ಳಿ ಗ್ರಾಮದಲ್ಲಿ ಸೆ.22ರ ಬೆಳಗ್ಗೆ 6ರಿಂದ ಸೆ.23ರ ಳಗ್ಗೆ 6ರವರೆಗೆ, ಬ್ಯಾಡಗಿ ಪಟ್ಟಣ, ಮೋಟೆಬೆನ್ನೂರು, ತಡಸ ಹಾಗೂ ಕದರಮಂಡಲಗಿ ಗ್ರಾಮಗಳಲ್ಲಿ ಸೆ.23ರ ಬೆಳಗ್ಗೆ 6ರಿಂದ ಸೆ.24ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ರಾಣೇಬೆನ್ನೂರ ಶಹರದಲ್ಲಿ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ, ಸೆ.22ರ ಬೆಳಗ್ಗೆ 6ರಿಂದ ಸೆ.23ರ ಬೆಳಗ್ಗೆ 6ರವರೆಗೆ, ಸೆ.26ರ ಬೆಳಗ್ಗೆ 6ರಿಂದ ಸೆ.27ರ ಬೆಳಗ್ಗೆ 6ರವರೆಗೆ, ಅ.2ರ ಬೆಳಗ್ಗೆ 6ರಿಂದ ಅ.3ರ ಬೆಳಗ್ಗೆ 6ರವರೆಗೆ, ಅ.6ರ ಬೆಳಗ್ಗೆ 6ರಿಂದ ಅ.7ರ ಬೆಳಗ್ಗೆ 6ರವರೆಗೆ, ಅ.8ರ ಬೆಳಗ್ಗೆ 6ರಿಂದ ಅ.9ರ ಬೆಳಗ್ಗೆ 6ರವರೆಗೆ, ಅ.14ರ ಬೆಳಗ್ಗೆ 6ರಿಂದ ಅ.15ರ ಬೆಳಗ್ಗೆ 6ರವರೆಗೆ, ರಟ್ಟಿಹಳ್ಳಿಯಲ್ಲಿ ಸೆ.28ರ ಬೆಳಗ್ಗೆ 6ರಿಂದ ಸೆ.29ರ ಬೆಳಗ್ಗೆ 6ರವರೆಗೆ ಹಾಗೂ ಸೆ.30ರ ಬೆಳಗ್ಗೆ 6ರಿಂದ ಅ.1ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಬಂಕಾಪುರ ಪಟ್ಟಣದಲ್ಲಿ ಸೆ.23ರ ಬೆಳಗ್ಗೆ 6ರಿಂದ ಸೆ.22ರ ಬೆಳಗ್ಗೆ 6ರವರೆಗೆ, ಅ.1ರ ಬೆಳಗ್ಗೆ 6ರಿಂದ ಅ.2ರ ಬೆಳಗ್ಗೆ 6ರವರೆಗೆ ಹಾಗೂ ಅ.9ರ ಬೆಳಗ್ಗೆ 6ರಿಂದ ಅ.10ರ ಬೆಳಗ್ಗೆ 6ರವರೆಗೆ, ಹಾನಗಲ್ಲನಲ್ಲಿ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ ಹಾಗೂ ಸೆ.24ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ, ಸವಣೂರ ಪಟ್ಟಣದಲ್ಲಿ ಸೆ.22ರ ಬೆಳಗ್ಗೆ 6ರಿಂದ ಸೆ.23ರ ಬೆಳಗ್ಗೆ 6ರವರೆಗೆ ಹಾಗೂ ಸೆ.24ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.