ರಾಷ್ಟ್ರಮಟ್ಟಕ್ಕೆ ಹಾವೇರಿ ಕೆವಿ ವಿದ್ಯಾರ್ಥಿಗಳು ಆಯ್ಕೆ

KV School, sports,
Published on

ಹಾವೇರಿ: ತಾಲೂಕಿನ ಕರ್ಜಗಿ ಬಳಿ ಇರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು 17 ವರ್ಷದೊಳಗಿನ ಖೋಖೋ ಮತ್ತು ಹ್ಯಾಂಡ್ ಬಾಲ್‌ನಲ್ಲಿ ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಲಯ ಮಟ್ಟದ ಖೋಖೋ ಕ್ರೀಡಾಕೂಟದಲ್ಲಿ ಹಾವೇರಿ ಕೆವಿ ವಿದ್ಯಾರ್ಥಿಗಳು ಭಾಗವಹಿಸಿ ಐದನೇ ಸ್ಥಾನ ಪಡೆದಿದ್ದು, 9ನೇ ತರಗತಿ ವಿದ್ಯಾರ್ಥಿ ನಿಂಗರಾಜ ಪವಾರ ರಾಷ್ಟ್ರಮಟ್ಟದ ಖೋಖೋ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಯಲಹಂಕದಲ್ಲಿ ಇತ್ತೀಚೆಗೆ ಜರುಗಿದ ಬಾಲಕಿಯರ ವಲಯಮಟ್ಟದ ಕ್ರೀಡಾಕೂಟದಲ್ಲಿ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರ ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಅದಿತಿ ಕೆಲ್ಲೂರ, ಲಕ್ಷ್ಮೀ ಪತ್ರಿ, ಶ್ರೇಯಾ ಕುಳೇನೂರ, ಸಿಂಧು ಕಮ್ಮಾರ, ರಕ್ಷಿತಾ ಹೊಸಮನಿ ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಸಂದೀಪಸಿಂಗ್ ಹಾಗೂ ಪ್ರಾಂಶುಪಾಲ ಪಿ.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net