ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪ ಮಾನವ; ಕುವೆಂಪು ಜನ್ಮದಿನಾಚರಣೆಯಲ್ಲಿ ಎಡಿಸಿ ಡಾ.ಎಲ್.ನಾಗರಾಜ ಹೇಳಿಕೆ

2 HVR 3
Published on

ಹಾವೇರಿ: ರಾಷ್ಟ್ರಕವಿ ಕುವೆಂಪು ಅವರ ಪ್ರಕಾರ ಮನುಷ್ಯ ಹುಟ್ಟುವಾಗ ಯಾವುದೇ ಸಂಕೋಲೆಗಳಿಗೆ ಒಳಗಾಗದೇ ವಿಶ್ವ ಮಾನವನಾಗಿ ಹುಟ್ಟುತ್ತಾನೆ. ನಂತರದಲ್ಲಿ ವಿವಿಧ ಕಟ್ಟಪ್ಪಣೆಗೆ ಒಳಗಾಗಿ ಅಲ್ಪ ಮಾನವನಾಗಿ ಬಿಡುತ್ತಾನೆ. ಮನುಷ್ಯ ಸ್ವತಂತ್ರನಾಗಿರಬೇಕು. ತನ್ನ ಇಷ್ಟದ ಜೀವನ ಸಾಗಿಸುವಂತಿರಬೇಕು. ಆಗ ಮಾತ್ರ ಪ್ರಬುದ್ಧ ಮಾನವನಾಗಿ ಇರಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವೇಶ್ವರ ಬಿಎಡ್ ಕಾಲೇಜ್ ಸಹಯೋಗದಲ್ಲಿ ಬುಧವಾರ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಹಲವು ವೈಚಾರಿಕತೆ ವಿಷಯಗಳನ್ನು ತಿಳಿಸಿದ್ದಾರೆ. ಅವುಗಳನ್ನು ಅರ್ಥೈಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಕುವೆಂಪು ಜಗತ್ತು ಕಂಡ ಅತ್ಯದ್ಭುತ ಕವಿಗಳು. ಇವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು

ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಮಾತನಾಡಿ, ಕುವೆಂಪು ಅವರು ಸಮಾಜದ ಒಳತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರು ಬರೆದ ಕೃತಿಗಳು, ಪುಸ್ತಕಗಳನ್ನು ಇಂದಿನ ಯುವ ಸಮುದಾಯ ಓದಬೇಕು ಎಂದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಉಪನ್ಯಾಸಕ ಶೇಖರ ಭಜಂತ್ರಿ ಹಾಗೂ ಬಿ.ಇಡ್ ಕಾಲೇಜ್ ಪ್ರಾಂಶುಪಾಲ ಬಿ.ವಿ.ಮಂಜುನಾಥ ರಾಷ್ಟ್ರಕವಿ ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶೀಲಾ ಪಾಟೀಲ ಹಾಗೂ ಶಿವಬಸವ ಬಣಕಾರ ರಾಷ್ಟ್ರಕವಿ ಕುವೆಂಪು ರಚಿತ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net