

ಹಾವೇರಿ: ತಾಲೂಕಿನ ಕುರುಬಗೊಂಡ ಗ್ರಾಮದ ರಂಗಮಂದಿರದಲ್ಲಿ ಮಾ.8ರಂದು ಬೆಳಗ್ಗೆ 11 ಗಂಟೆಗೆ ಕುರಬಗೊಂಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಹಾವೇರಿ ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಗುರು ಮೂಕಪ್ಪ ಶಿವಯೋಗಿಗಳಮಠದ ಮಹಾಂತ ಸ್ವಾಮೀಜಿ ಹಾಗೂ ಕುರುಬಗೊಂಡದ ಪಂ.ವೀರಭದ್ರಯ್ಯ ಶಾಸ್ತ್ರೀ ಸಾನ್ನಿಧ್ಯವಹಿಸಲಿದ್ದಾರೆ. ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಸವರಾಜ ಶಿವಣ್ಣನವರ ಸಂಸ್ಥಾಪಕರ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಕೊಟ್ರೇಶಪ್ಪ ಬಸೇಗಣ್ಣಿ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ನಿರ್ದೇಶಕರಾದ ಲಿಂಗರಾಜ ಚಪ್ಪರದಹಳ್ಳಿ, ಚನ್ನಬಸಪ್ಪ ಹುಲ್ಲತ್ತಿ, ಆರ್.ಎಸ್ ಹಾವೇರಿ, ಕೆಸಿಸಿ ಬ್ಯಾಂಕ್ ಸಿಇಒ ಸುನಿತಾ ಸಿದ್ರಾಮ, ಸಹಕಾರ ಸಂಘದ ಉಪನಿಬಂಧಕ ಅಜ್ಮತ್‌ಉಲ್ಲಾಖಾನ್, ವಿಕ್ರಂ ಕುಲಕರ್ಣಿ, ಶಿವಾನಂದ ಹೂಗಾರ, ಪ್ರಕಾಶ ಹಿರಗೂಳಿ, ಗ್ರಾಪಂ ಅಧ್ಯಕ್ಷೆ ಹೇಮಾವತಿ ಹಾವೇರಿ, ಉಪಾಧ್ಯಕ್ಷೆ ಸುಧಾ ಪಾಟೀಲ, ಮಾಲತೇಶ ಮಾಗೋಡ, ಮಹೇಶಪ್ಪ ಹೆಡಿಯಾಲ, ಶಿವಾನಂದ ಆಲದಕಟ್ಟಿ, ರುದ್ರಪ್ಪ ಅಂತ್ರದ, ಕುರುಬಗೊಂಡ, ಕಲ್ಲಾಪೂರ, ಹಿರೇಲಿಂಗದಹಳ್ಳಿಯ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಎಲ್.ಎಸ್ ಪಾಟೀಲ, ಮಾಲತೇಶ ಮಾಗೋಡ, ಮಹಾಂತೇಶ ಬಶೆಟ್ಟಿಯವರ, ಮಹಾಂತೇಶ ಕುಲಕರ್ಣಿ, ಹುಸೇನಮಿಯಾ ಹೆಡಿಗ್ಗೊಂಡ, ಶಂಕ್ರಪ್ಪ ಮುದಿಯಪ್ಪನವರ, ಬಾಬು ಶಿವಮ್ಮನವರ, ಬಿ.ಬಿ ಕುಲಕರ್ಣಿ, ಶಾಂತಪ್ಪ ಹಾವೇರಿ, ಬಿ.ಎಚ್ ಗೌಡ್ರ, ಇತರರಿದ್ದರು.