ಕುರುಬಗೊಂಡದಲ್ಲಿ ಸವಾಲ ಜವಾಬ ಭಜನಾ ಸ್ಪರ್ಧೆ ನಾಳೆ

Published on

ಹಾವೇರಿ: ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಗಣೇಶೋತ್ಸವದ ನಿಮಿತ್ತ ಸೆ.14ರಂದು ರಾತ್ರಿ 9.30ಕ್ಕೆ ಭಾರಿ ಸವಾಲ ಜವಾಬ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಗಜಾನನ ಯುವಕ ಸ್ವಸಹಾಯ ಸಂಘದ ಗಣಪತಿ ಮಂಟಪದಲ್ಲಿ ಸ್ಪರ್ಧೆ ನಡೆಯಲಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ದೇವರಕೊಂಡ ಗ್ರಾಮದ ದುರ್ಗಾದೇವಿ ಭಜನಾ ಸಂಘ, ಧಾರವಾಡ ತಾಲೂಕು ಕಣವಿಹೊನ್ನಾಪುರದ ಮಾರುತಿ ಭಜನಾ ಸಂಘಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರುದ್ರೇಶ ಚಿನ್ನಣ್ಣನವರ, ಗ್ರಾಮಸ್ಥರು, ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net