ಹಾವೇರಿ: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜ್‌ಗಳ ಆಡಳಿತ ಮಂಡಳಿ ಸಂಘ(ಕುಪ್ಮಾ)ದ ವತಿಯಿಂದ ನಗರದ ಹಾನಗಲ್ಲ ರಸ್ತೆಯ ಶಿವಾ ಕನ್ವೆನ್ಷನ್ ಹಾಲ್‌ನಲ್ಲಿ ನ.8 ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಆಯೋಜಿಸಲಾಗಿದೆ.
ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದು, ಜಿಲ್ಲಾ ಪಿ.ಯು ಉಪನಿರ್ದೇಶಕ ಅಶೋಕ ಶಾಸ್ತ್ರೀ, ಕುಪ್ಮಾ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ ಮತ್ತು ಕುಪ್ಮಾ ರಾಜ್ಯ ಸಮಿತಿಯ ಸದಸ್ಯ ನಾಗರಾಜ ಶೆಟ್ಟಿ, ಇತರರು ಭಾಗವಹಿಸುವರು. ಕುಪ್ಮಾ ಜಿಲ್ಲಾಧ್ಯಕ್ಷ ಎಂ.ಬಿ.ಸತೀಶ ಅಧ್ಯಕ್ಷತೆ ವಹಿಸುವರು.
ಸರ್ಕಾರದಿಂದ ಕಡೆಗಣಿಸಲ್ಪಟ್ಟ ಖಾಸಗಿ ಕಾಲೇಜ್‌ಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ‘ಕುಪ್ಮಾ ಅತ್ಯುತ್ತಮ ಶಿಕ್ಷಕ- 2025’ ಪ್ರಶಸ್ತಿ ನೀಡಲಾಗುವುದು. ಬದಲಾಗುತ್ತಿರುವ ಶೈಕ್ಷಣಿಕ ಪದ್ಧತಿಗಳು ಮತ್ತು ಸವಾಲುಗಳು ವಿಷಯದ ಕುರಿತು ಶೈಕ್ಷಣಿಕ ಮನೋಶಾಸ್ತ್ರಜ್ಞರಾದ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್ ಮತ್ತು ಶೈಕ್ಷಣಿಕ ತರಬೇತುದಾರ ಆದರ್ಶ ಗೋಖಲೆ ಉಪನ್ಯಾಸ ನೀಡುವರು. ಪಿಯುಸಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕುಪ್ಮಾ ಪ್ರಕಟಣೆ ಕೋರಿದೆ.