

ಸವಣೂರ: ವಿದ್ಯಾರ್ಥಿಗಳು ಮೊಬೈಲ್ ಮೇಲೆ ಹೆಚ್ಚು ಅವಲಂಬನೆ ಆಗದೇ ಪಠ್ಯ ಪುಸ್ತಕಗಳನ್ನು ಓದುವ ಕಡೆಗೆ ಗಮನ ಹರಿಸಬೇಕ. ಜತೆಗೆ ವಿಜಯವಾಣಿ ತಂಡ ಪ್ರಕಟಿಸುತ್ತಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆ ಜ್ಞಾನಾರ್ಜನೆಗೆ ಸಹಕಾರಿಯಾಗಿದ್ದು, ನಿತ್ಯವೂ ಇದನ್ನು ಓದುವ ರೂಢಿ ಬೆಳೆಸಿಕೊಳ್ಳಿ ಎಂದು ಗ್ರಾಮಸ್ಥ ರೈಲ್ವೆ ನೌಕರ ಸಂತೋಷ ಆಡೂರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 77ನೇ ಸ್ವಾಂತಂತ್ರೊೃೀತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಗಳನ್ನು ವಿತರಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುವ ವಿದ್ಯಾರ್ಥಿ ಮಿತ್ರನನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಶಾಲಾ ಮುಖ್ಯ ಶಿಕ್ಷಕಿ ರೂಪಾ ಸಜ್ಜನ, ಶಿಕ್ಷಕರಾದ ಎಸ್.ಎ ಹಿರೇಮಠ. ಎಂ.ಎಚ್ ಮಲ್ಲಿಕ, ಉಮಾ ಭಜಂತ್ರಿ, ಸಂಗೀತಾ ಗದಗ, ರೇಖಾ ಕೆ.ಬಿ., ಎಲ್.ಎಫ್ ಶೆರೆವಾಡ, ದೀಪಾ ಇಚ್ಚಂಗಿ, ಚನ್ನಮ್ಮ ಅಡೂರ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹರಕೂಣಿ, ಉಪಾಧ್ಯಕ್ಷ ಶಬ್ಬಿರ ಅಹ್ಮದ್ ನದಾಪ, ಸದಸ್ಯರಾದ ರಾಜು ದಾಸರ, ಚಂದ್ರಕಲಾ ಸಣ್ಣಭರಮಣ್ಣನವರ, ನಿಂಗಪ್ಪ ತೋಲಕೂಪ್ಪದ, ಪತ್ರಿಕಾ ವಿತರಕ ಚಂದ್ರಶೇಖರ ಅಕ್ಕಿ ಮತ್ತಿತರರಿದ್ದರು.