

ಹಾವೇರಿ: ಇಲ್ಲಿನ ಸ್ಥಳೀಯ ನಿವಾಸಿ, ನಿವೃತ್ತ ಶಿಕ್ಷಕ ವಿ.ಆರ್.ಕಿತ್ತೂರಮಠ ಅವರ ಪುತ್ರಿ ದೀಪಾ ಕಿತ್ತೂರಮಠ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಪಿ (ಪಿಎಚ್‌ಡಿ) ಪದವಿ ನೀಡಿ ಗೌರವಿಸಿದೆ.
ಕವಿವಿಯ ಗಣಿತ ವಿಭಾಗ ‘ಎ ಸ್ಟಡಿ ಆನ್ ಗ್ರಾಫ್ ಪ್ಯಾರಾಮೀಟರ್ಸ್ ಆ್ಯಂಡ್ ಇಟ್ಸ್ ಅಪ್ಲಿಕೇಶನ್ಸ್’ ವಿಷಯದ ಕುರಿತು ಪ್ರೊ.ಎಚ್.ಎಸ್.ರಮಣೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರಿಗೆ ಇತ್ತೀಚೆಗೆ ಧಾರವಾಡದ ಕವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ ಎಂದು ಪ್ರಕಟಣೆ ತಿಳಿಸಿದೆ.