

ಹಾವೇರಿ: ಕೆಎಸ್‌ಆರ್‌ಪಿ ಘಟಕದ ಐಜಿಪಿ ಸಂದೀಪ ಪಾಟೀಲ ಅವರು ಬುಧವಾರ ಮತ್ತು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಕಚೇರಿಯ ಎಲ್ಲ ಶಾಖೆಗಳ ಪರಿವೀಕ್ಷಣೆ ನಡೆಸಿದರು.
ಶಹರ ಪೊಲೀಸ್ ಠಾಣೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಠಾಣೆಯ ದಾಖಲೆಗಳನ್ನು ಪರಿಶೀಲಿಸಿದರು. ಗುರುವಾರ ಕೆರಿಮತ್ತಿಹಳ್ಳಿಯ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಕವಾಯತು ವೀಕ್ಷಿಸಿದರು. ಬಳಿಕ ಪೊಲೀಸ್ ವಾಹನಗಳ ತಪಾಸಣೆ, ಡಿಎಆರ್ ಘಟಕದ ಪರಿಶೀಲನೆ ನಡೆಸಿದರು. ಕೊನೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಅಧಿಕಾರಿಗಳ ವಿಮರ್ಶನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಐಜಿಪಿ ಕೆಲ ಸಲಹೆ, ಸೂಚನೆಗಳನ್ನು ನೀಡಿದರು ಎಂದು ತಿಳಿದು ಬಂದಿದೆ.