

ಹಾವೇರಿ: ತಾಲೂಕಿನ ಕೋಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಧ್ವಜಾರೋಹಣದ ನಂತರ ಮಕ್ಕಳಿಂದ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ವಿದ್ಯಾರ್ಥಿಗಳು ಭಾಷಣ, ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ರಂಗೋಲಿ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ಬಿ.ಎಂ.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಹೋಳಗಿ, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಹುಲ್ಮನಿ, ಕಾಸಿಮಸಾಬ ಮುಂದಿನಮನಿ, ಶಿಕ್ಷಕರಾದ ರಮೇಶ ಸಣ್ಮನಿ, ಎಂ.ಕೆ.ಹೊನ್ನಜ್ಜರ, ನಾಗರಾಜ ಹುಡೇದ, ಟಿ.ಜೆ.ಬಡಪ್ಪನವರ, ಸಹನಾ ವಡ್ನಿಕೊಪ್ಪ, ಶಿವಾನಂದ ಹುರಳಿ, ಅನಿತಾ ಬಣಕಾರ, ಮರ್ಧನಸಾಬ ಮುಂದಿನಮನಿ, ಯಲ್ಲಪ್ಪ ಏರಿಮನಿ, ಸಂತೋಷ ಗುಡ್ಡಪ್ಪನವರ, ಬಸವರಾಜ ಉಕ್ಕುಂದ, ಹೇಮಾ ಕಾಮಣಿ, ವಜ್ರಕುಮಾರ ಹೋಳಗಿ, ರಾಜು ಧನ್ನಣ್ಣನವರ, ಇತರರಿದ್ದರು.
ಎಸ್.ಪಿ.ಬೆಳ್ಳಟ್ಟಿಮಠ ನಿರೂಪಿಸಿದರು. ಬಿ.ಬಿ.ನಾಣಾಪುರ ವಂದಿಸಿದರು.