ದಾನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ; ಕೋಡಬಾಳ ಗ್ರಾಮದ ಧರ್ಮಸಭೆಯಲ್ಲಿ ಗುರುಶಾಂತೇಶ್ವರ ಶ್ರೀ ಅಭಿಪ್ರಾಯ

6 HVR 3
Published on

ಹಾವೇರಿ: ಸಮಾಜದ ಪ್ರತಿಯೊಬ್ಬ ಮನುಷ್ಯರೂ ದಾನ ಮಾಡುವ ಗುಣ ಬೆಳಿಸಿಕೊಳ್ಳಬೇಕು. ದಾನದಿಂದ ಮನಸ್ಸಿಗೆ ನೆಮ್ಮದಿ ಒಳ್ಳೆಯ ಕೆಲಸವನ್ನು ಮಾಡಿದ ತೃಪ್ತಿ ದೊರಕುತ್ತದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕೋಡಬಾಳ ಗ್ರಾಮದಲ್ಲಿ ಹಮ್ಮಿಕೊಂಡಿರುವ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಪ್ರವಚನದ ಮಂಗಳವಾರದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆರ್ಶೀವಚನ ನೀಡಿದರು.

ಮನುಷ್ಯ ತನ್ನ ಸತ್ಯ ಶುದ್ದ ಕಾಯಕದ ಜತೆಗೆ ದಾನ, ಧರ್ಮ, ಪರೋಪಕಾರದ ಗುಣಗಳನ್ನು ಬೆಳಸಿಕೊಳ್ಳಬೇಕು. ಅದಕ್ಕೆ ಸದ್ಗುರುವಿನ, ಹಿರಿಯರ ಸಂದೇಶ ಮತ್ತು ಮಾರ್ಗದರ್ಶನ ಅವಶ್ಯಕವಾಗಿದ್ದು, ಅಂತಹ ವಾತವರಣ ಸೃಷ್ಟಿಸುವ ಅನಿರ್ವಾಯತೆ ಇಂದು ನಿರ್ಮಾಣವಾಗಿದೆ. ದಾನದಿಂದಲೇ ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು ಬೆಳೆಯುತ್ತಿವೆ. ಮನುಷ್ಯ ತಾನು ಗಳಿಸಿದ ಸಿರಿವಂತಿಕೆಯಲ್ಲಿ ಅಲ್ಪವಾದರೂ ಧರ್ಮ ಕಾರ್ಯಕ್ಕೆ ಅರ್ಪಿಸಿದರೇ ಅದು 100ಪಟ್ಟು ಹಿಂದಿರುಗಿ ಬರುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರವಚನಕಾರ ಗುರುಮಹಾಂತಯ್ಯ ಆರಾಧ್ಯಮಠ ಮಾತನಾಡಿ, ಹೆತ್ತ ತಂದೆ-ತಾಯಿಯನ್ನು ಇದ್ದಾಗಲೇ ಗೌರವಿಸಿ, ಪ್ರೀತಿಯಿಂದ ಕಾಣಬೇಕೆಂದರು.

ಶ್ರೀಗಳಿಂದ ರುದ್ರಾಕ್ಷಿ ಧಾರಣೆ:

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತಾಧಿಗಳಿಗೆ ನೆಗಳೂರು ಶ್ರೀಗಳು ರುದ್ರಾಕ್ಷಿ ಧಾರಣೆ ಮಾಡಿದರು. ಇದಕ್ಕೂ ಮುನ್ನ ಶ್ರೀಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net