

ಹಾವೇರಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 533 ವಿದ್ಯಾರ್ಥಿಗಳ ಪೈಕಿ 471 ವಿದ್ಯಾರ್ಥಿಗಳು ಶೇ.88.37 ಪ್ರತಿಶತದೊಂದಿಗೆ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಸಂತೋಷ ಡಿಳ್ಳೆಪ್ಪನವರ ಶೇ.90ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧನುಶ್ರೀ ಬೆಟಗೇರಿ (ಶೇ.89.17) ದ್ವಿತೀಯ ಹಾಗೂ ಅಮೃತಾ ಮುಲ್ಕಿಗೌಡ್ರ (ಶೇ.87.67) ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಾಗರಾಜ ಹೊಟ್ಟೂರ ಹಾಗೂ ಗೌಸಿಯಾಬಾನು ಧಾನೇಬಾಗ ಶೇ.96ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಹನಾ ನರೇಗಲ್ಲ (ಶೇ.93.83) ದ್ವಿತೀಯ ಹಾಗೂ ಪೂಜಾ ಹಿರೇಮಠ (ಶೇ.93.67) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಕ್ಷಿತಾ ಹಬೀಬ (ಶೇ.96.33) ಪ್ರಥಮ, ಮಾನ್ಯಾ ಎ.ಡಿ. (ಶೇ.95) ದ್ವಿತೀಯ ಹಾಗೂ ಅಜ್ಘರಲಿ ದುಕಾನದಾರ (ಶೇ.94) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.