ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ; ಜಿಎಚ್ ಕಾಲೇಜ್‌ನಲ್ಲಿ ಡಾ.ವಸಂತಕುಮಾರ ಬಿ. ಹೇಳಿಕೆ

Published on

ಹಾವೇರಿ: ನಮ್ಮ ದೈನಂದಿನ ಬದುಕಿಗೆ ನಿತ್ಯವೂ ಹೊಸತನದ ಪರಿಚಯ ಮತ್ತು ಆರೋಗ್ಯ ಭಾಗ್ಯಗಳನ್ನು ಒದಗಿಸುವ ಪರಿಸರದ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಭದ್ರಾವತಿ ಸರ್ ಎಂ.ವಿಶ್ವೇಶ್ವರಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಡಾ.ವಸಂತಕುಮಾರ ಬಿ. ಹೇಳಿದರು. ನಗರದ ಕೆ.ಎಲ್.ಇ ಸಂಸ್ಥೆಯ ಜಿ.ಎಚ್. ಕಾಲೇಜ್‌ನ ಇಕೋ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪರಿಸರ ವ್ಯವಸ್ಥೆಯ ಇತ್ತೀಚಿನ ಪ್ರಗತಿಗಳು ಮತ್ತು ಸಂರಕ್ಷಣಾ ತಂತ್ರಗಳು ಎಂಬ ವಿಷಯದ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವ್ಯವಸ್ಥೆಗಳು ಬದಲಾದಂತೆ ಪರಿಸರವೂ ಬದಲಾಗುತ್ತಿದೆ. ಆದರೆ ಯುವಜನತೆ ಎಚ್ಚೆತ್ತುಕೊಂಡು ಸುಂದರ ಮತ್ತು ಸಮೃದ್ಧ ಪರಿಸರವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು.

ಪ್ರಾಚಾರ್ಯ ಪ್ರೊ.ಎಂ.ಎಂ.ಹೊಳ್ಳಿಯವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ರೂಪಾ ಕೋರೆ, ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.

ಇಕೋ ಕ್ಲಬ್ ಸಂಯೋಜಕ ಡಾ.ಈ.ಬಿ.ಸೇಡಂಕರ ಸ್ವಾಗತಿಸಿದರು. ಅಪೂರ್ವ ಎನ್.ಬಿ. ಪರಿಚಯಿಸಿದರು. ಡಾ.ಶಿವಾನಂದ ಪಾಯಮಲ್ಲೆ ವಂದಿಸಿದರು. ಮೇಘಾ ಕಿನ್ನಾಳಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net