

ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹ್ಯಾಂಡ್‌ಬಾಲ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಟೇಬಲ್ ಟೆನಿಸ್, ಕುಸ್ತಿ, ಕರಾಟೆ, ಗುಂಡು ಎಸೆತ, ಚಕ್ರ ಎಸೆತ, 400 ಮೀ. ಹರ್ಡಲ್ಸ್, ಟೇಕ್ವಾಂಡೋ, ಈಜು ಸ್ಪರ್ಧೆಗಳಲ್ಲಿ ಒಟ್ಟು 41 ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ 24 ಬಾಲಕರು ಹಾಗೂ 17 ಬಾಲಕಿಯರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಪೂಜಾ ಎಂ. ಹಾಗೂ ಪ್ರೊ.ಶ್ರೀಕಾಂತ ಗುಡಗುಡಿ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯಎಂ.ಸಿ.ಕೊಳ್ಳಿ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಸ್.ಎಲ್. ಬಾಲೇಹೊಸೂರ, ಸ್ಥಾನಿಕ ಮಂಡಳಿಯ ಸದಸ್ಯರಾದ ಎಸ್.ಜೆ.ಹೆರೂರ, ಸಿ.ಬಿ.ಹಿರೇಮಠ, ಜೆ.ಎಸ್.ಅರಣಿ, ಬಸವರಾಜ ಮಾಸೂರ, ಎಸ್.ಎಂ.ಹುರಳಿಕುಪ್ಪಿ, ಪ್ರಾಚಾರ್ಯರಾದ ಡಾ.ಸಂಧ್ಯಾ ಆರ್. ಕುಲಕರ್ಣಿ, ಡಾ.ಜೆ.ಆರ್.ಶಿಂಧೆ, ಎನ್.ಎ.ಗಾಣಗಿ, ಉತ್ತಮ ಕಂಠೆ ಹರ್ಷ ವ್ಯಕ್ತಪಡಿಸಿದ್ದಾರೆ.