

ಹಾವೇರಿ: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಪ್ರಥಮ ಚಿಕಿತ್ಸಾ ಜಾಗೃತಿ ಕುರಿತು ಕಾರ್ಯಾಗಾರ ಜರುಗಿತು.
ಭಾರತೀಯ ರೆಡ್ ಕ್ರಾಸ್‌ನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ನೀಲೇಶ ಎಂ.ಎನ್., ಸಹ ಗೌರವಕಾರ್ಯದರ್ಶಿ ನಿಂಗಪ್ಪ ಆರೇರ, ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರಾದ ಉಡಚಪ್ಪ ಮಾಳಗಿ, ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಅಂಕಿತ ಆನಂದ, ಡಾ.ಮಂಜುನಾಥ ಪಿ., ಇರ್ಷಾದ್ ಅಲಿ, ಡಾ.ಜೆ.ಎಫ್ ಹೊಸಮನಿ, ಇತರರು ಪಾಲ್ಗೊಂಡಿದ್ದರು.
ವೈಆರ್‌ಸಿ ಅಧಿಕಾರಿ ಡಾ.ಚೇತನಾ ಎಂ. ಸ್ವಾಗತಿಸಿದರು. ಡಾ.ಅಶ್ವಿನಿ ಹತ್ತಿಕಾಳ ವಂದಿಸಿದರು. ಸೋಮಣ್ಣ ಡಂಬರಮತ್ತೂರು ನಿರೂಪಿಸಿದರು.