ಜಿ.ಎಚ್.ಕಾಲೇಜ್‌ನಲ್ಲಿ ಓಡಿಸ್ಸಿ ನೃತ್ಯ ವೈಭವ

20 HVR 5 B
Published on

ಹಾವೇರಿ: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಸ್ಪಿಕ್‌ಮ್ಯಾಕೆ ಸಂಸ್ಥೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ವಿದುಷಿ ಸರಿತಾ ಮಿಶ್ರಾ ಅವರಿಂದ ಸಾಂಪ್ರದಾಯಿಕ ಓಡಿಸಿ ನೃತ್ಯ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ವೈಶಿಷ್ಠ್ಯಪೂರ್ಣವಾಗಿ ಓಡಿಸ್ಸಿ ನೃತ್ಯದ ಪರಂಪರೆ ಮತ್ತು ಪ್ರಾಮುಖ್ಯತೆಯ ವಿವರಣೆಯೊಂದಿಗೆ ಸರಿತಾ ಮಿಶ್ರಾ ನೃತ್ಯದ ಹಲವು ಪ್ರಾಕಾರಗಳನ್ನು ಪ್ರಾತ್ಯಕ್ಷಿಕೆಯ ಮುಖಾಂತರ ಪ್ರಸ್ತುತಪಡಿಸಿದರು.

ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ, ಚಿತ್ರ ಕಲಾವಿದ ಕರಿಯಪ್ಪ ಹಂಚಿನಮನಿ, ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ, ಸಾಂಸ್ಕೃತಿಕ ವೇದಿಕೆಯ ಪ್ರೊ.ಗೀತಾ ಮಂಕಣಿ, ಪ್ರೊ.ಡಿ.ಎ.ಕೊಲ್ಲಾಪುರೆ, ಐಕ್ಯುಎಸಿ ಸಂಯೋಜಕಿ ಡಾ.ರೂಪಾ ಕೋರೆ, ಮತ್ತಿತರರು ಭಾಗವಹಿಸಿ ನೃತ್ಯವೈಭವ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net