

ಹಾವೇರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಶಿಕ್ಷಣ ತಜ್ಞ ಡಾ.ಪ್ರಭಾಕರ ಕೋರೆಯವರ 77ನೇ ವರ್ಷದ ಜನ್ಮದಿನದ ಪ್ರಯುಕ್ತ ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ (ವೈಆರ್‌ಸಿ) ವಿಭಾಗದ ವತಿಯಿಂದ ಇಲ್ಲಿನ ಜಿಲ್ಲಾಸ್ಪತ್ರೆಯ 100ಕ್ಕೂ ಅಧಿಕ ಒಳರೋಗಿಗಳಿಗೆ ಗುರುವಾರ ಹಣ್ಣು, ಬ್ರೇಡ್, ಬಿಸ್ಕತ್ ಹಂಚಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಡಾ.ಪ್ರಭಾಕರ ಕೋರೆಯವರು ನಡೆದು ಬಂದ ಸಾಧನೆಯ ವಿಡಿಯೋ ಡಾಕ್ಯುಮೆಂಟ್ ಪ್ರದರ್ಶಿಸಲಾಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಪ್ರಕಾಶ ನವಲೆ ಉಪಸ್ಥಿತರಿದ್ದರು. ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ, ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ, ಪ್ರೊ.ಡಿ.ಎ.ಕೊಲ್ಲಾಪುರೆ, ವೈಆರ್‌ಸಿ ಅಧಿಕಾರಿಗಳಾದ ಡಾ.ಅಶ್ವಿನಿ ಹತ್ತಿಕಾಳ, ಡಾ.ಚೇತನಾ ಎಂ., ಪ್ರೊ.ಶಮಂತಕುಮಾರ, ಪ್ರೊ.ಎಂ.ಎಸ್.ಬೆಂಡಿಗೇರಿ, ಎನ್.ಸಿ.ಸಿ. ಅಧಿಕಾರಿ ಡಾ.ನಾಗರಾಜ ಎಂ., ಗ್ರಂಥಪಾಲಕ ಆತ್ಮಾನಂದ ಹೊಳೆಯಣ್ಣವರ, ವೈಆರ್‌ಸಿ ಸ್ವಯಂ ಸೇವಕರು ಹಾಗೂ ಕಾಲೇಜಿನ ಸಿಬ್ಬಂದಿ ಪಾಲ್ಗೊಂಡಿದ್ದರು.