

ಹಾವೇರಿ: ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ಎಂಬ ವಿಷಯದ ಕುರಿತು ಮೋಹನ್ ಕುಮಾರ್ ಮತ್ತು ಅಶೋಕ ಗಡ್ಡಿಗೌಡರ ವಿಶೇಷ ಉಪನ್ಯಾಸ ನೀಡಿದರು. ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತಾಗಿ ಮಾರ್ಗದರ್ಶನ ನೀಡಿದರು. ಕೆ.ಎಲ್.ಇ ಸಂಸ್ಥೆಯ ಸದಸ್ಯರಾದ ಎಂ.ಸಿ.ಕೊಳ್ಳಿ, ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ, ಪ್ರೊ.ಹೇಮಂತ ಸಿ.ಎನ್, ಇತರರಿದ್ದರು.