

ಹಾವೇರಿ: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಮೂವರಿಗೆ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ ದೊರೆತಿದೆ.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಗುರುಪಾದಯ್ಯ ಸಾಲಿಮಠರಿಗೆ ಅತ್ಯುತ್ತಮ ವಾಣಿಜ್ಯ ಅಧ್ಯಾಪಕ ಪ್ರಶಸ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಗದೀಶ ಹೊಸಮನಿ ಹಾಗೂ ಪದವಿ ಪೂರ್ವ ವಿಭಾಗದ ಪ್ರೊ.ಸಿದ್ದೇಶ್ವರ ಹುಣಸಿಕಟ್ಟಿಮಠ ಅವರಿಗೆ ಅತ್ಯುತ್ತಮ ಕನ್ನಡ ಅಧ್ಯಾಪಕ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ನಿಮ್ಹಾನ್ಸ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಅವೋಟೆಕ್-23 ಕಾರ್ಯಕ್ರಮದಲ್ಲಿ ಕರ್ನಾಟಕ ಟೀಚರ್ಸ್ ಎಜುಕೇಶನಲ್ ಅವಾರ್ಡ್ಸ್ 2023ನೇ ಶೈಕ್ಷಣಿಕ ಸಾಲಿನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾರಂಭದಲ್ಲಿ ಸುಮನ್ ಟಿವಿ ನೆಟ್‌ವರ್ಕ್ ಸಂಸ್ಥಾಪಕ ಕಾರ್ಯಾಧ್ಯಕ್ಷ ಸುಮನ್, ಅಮೆರಿಕದ ಲಂಡನ್ ಸ್ಕಿಲ್ ಸಂಘಟನೆಯ ಸಂಸ್ಥಾಪಕ ನಿರ್ದೇಶಕಿ ಡಾ.ಫರೇನ್ ಸುಮಾನಿ, ಐಟಿ ಟಿವಿಯ ಗ್ಲೋಬಲ್ ಮೀಡಿಯಾ ಸಂಸ್ಥಾಪಕ ಕಾರ್ಯಾಧ್ಯಕ್ಷ ರಮಣ್ ಭೂಪತಿ, ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನ ಕಾರ್ಯಾಧ್ಯಕ್ಷ ಮೀರ್ ಸಮೀನ್ ರಝಾ, ಪ್ರೊವಿಡೆನ್ಸ್ ಮೀಕ್ರೋ ಬಯೋಮಿ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ.ಚಂದ್ರಶೇಖರ ತೊಡುಪುನುರಿ, ಅವೋಟೆಕ್-23 ಪ್ರೊಜೆಕ್ಟ್‌ನ ಸಂಯೋಜಕ ಸುರೇಶ ಬಾಬು ಹಾಗೂ ಕೃಷ್ಣಮೂರ್ತಿ, ತುಮಕೂರು-ಬೆಂಗಳೂರು ಸಿದ್ಧಾರ್ಥ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ಟೈಮ್ಸ್‌ನೌ ನ್ಯೂಸ್‌ನ ನಿರೂಪಕ ಡಾ.ಸೈಯದ್ ಅಸದ್ ಅಬ್ಬಾಸ್, ರೇಡಿಯಾಲಾಜಿಸ್ಟ್ ಡಾ.ತೇಜಶ್ವರಿ, ಮತ್ತಿತರರು ಉಪಸ್ಥಿತರಿದ್ದರು.