ಡಾ.ಕೋರೆ ಜನ್ಮದಿನ ಹಿನ್ನೆಲೆ ರೋಗಿಗಳಿಗೆ ಹಣ್ಣು ವಿತರಣೆ

2 HVR 7 A
Published on

ಹಾವೇರಿ: ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ, ಶಿಕ್ಷಣ ತಜ್ಞ ಡಾ.ಪ್ರಭಾಕರ ಕೋರೆ ಅವರ 76ನೇ ಜನ್ಮದಿನದ ಅಂಗವಾಗಿ ನಗರದ ಕೆಎಲ್‌ಇ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ 200ಕ್ಕೂ ಅಧಿಕ ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಲಾಯಿತು.
ವೈದ್ಯರಾದ ಡಾ.ಎಲ್.ಎಲ್ ರಾಥೋಡ, ಕಾಲೇಜಿನ ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ, ಡಾ.ಎಂ.ಪಿ ಕಣವಿ, ಯೂತ್ ರೆಡ್ ಕ್ರಾಸ್ ಘಟಕದ ಪದಾಧಿಕಾರಿಗಳಾದ ಪ್ರೊ.ಹೇಮಂತ ಸಿ.ಎನ್., ಪ್ರೊ.ನಯನಾ ಎಸ್., ಡಾ.ಎಸ್.ಆರ್ ನಾಯಕ, ಡಾ.ಎಸ್.ಆರ್ ಕೋರಿಶೆಟ್ಟರ್, ಡಾ.ರಾಜೇಶ್ವರಿ, ಡಾ.ಅಶ್ವಿನಿ ಹತ್ತಿಕಾಳ, ಪ್ರೊ.ರೂಪಾ ಕೋರೆ, ಪ್ರೊ.ರಿಷಿಕಾ ಡಿ., ಪ್ರೊ.ಪೂಜಾ ಎಂ., ಪ್ರೊ.ಸಂಜೀವಕುಮಾರ, ಪ್ರೊ.ಶರಣಪ್ಪ ಜಗ್ಗಲ, ಪ್ರೊ.ಶರಣು, ಪ್ರೊ.ಉದಯಕುಮಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net