

ಹಾವೇರಿ: ನಗರದ ಪ್ರವಾಸಿ ಮಂದಿರಕ್ಕೆ ಗುರುವಾರ ಆಗಮಿಸಿದ ಕಿತ್ತೂರು ಉತ್ಸವ -2024ರ ವಿಜಯ ಜ್ಯೋತಿ ರಥಯಾತ್ರೆಗೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಪರವಾಗಿ ಭವ್ಯ ಸ್ವಾಗತ ಕೋರಲಾಯಿತು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಿತ್ತೂರು ಉತ್ಸವದ ವಿಜಯ ಜ್ಯೋತಿ ರಥಯಾತ್ರೆಯು ಹಾನಗಲ್ಲ ಮಾರ್ಗವಾಗಿ ಶಿರಸಿಗೆ ತೆರಳಿತು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ ಶರಣಮ್ಮ, ಗ್ರೇಡ್-2 ತಹಸೀಲ್ದಾರ ಅಮೃತಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಂ.ಎಸ್.ಕೋರಿಶೆಟ್ಟರ, ಭುವನೇಶ್ವರ ಶಿಡ್ಲಾಪುರ, ಜಗದೀಶ ಕನವಳ್ಳಿ, ರಾಜಶೇಖರ ಹಲಸೂರ, ವಿದ್ಯಾರ್ಥಿಗಳು, ಇತರರಿದ್ದರು.