ಖಬರಸ್ತಾನ ಕಟ್ಟಡಕ್ಕೆ ತಡೆಯಾಜ್ಞೆ, ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

Khabarsthan
Published on

ಹಾವೇರಿ: ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದ ಎದುರಿನ ಖಬರಸ್ತಾನದಲ್ಲಿ ಅನಧಿಕೃತವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದ್ದು, ಈ ಸ್ಥಳದಲ್ಲಿ ಯಾವುದೇ ಕಟ್ಟಡ ಕಟ್ಟದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಹಾಗಾಗಿ, ಈ ಸ್ಥಳದಲ್ಲಿ ಯಾವುದೇ ಕಟ್ಟಡ ಕಟ್ಟದಂತೆ ಖಬರಸ್ತಾನದ ನಿರ್ವಾಹಕರು, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಹಿಂದು ನಾಗರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಯವರಿಗೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದೆ.

ಈ ಸ್ಥಳದಲ್ಲಿ ಇಟ್ಟಿಗೆ, ಇತರೆ ಸಾಮಗ್ರಿ ಇರಿಸಲಾಗಿದೆ. ಕಟ್ಟಡ ಕಾಮಗಾರಿ ಯಾರಿಗೂ ಕಾಣಬಾರದೆಂದು ಪರದೆ ಅಳವಡಿಸಲಾಗಿದೆ. ಈ ಕೂಡಲೇ ಇವುಗಳನ್ನು ತೆರವುಗೊಳಿಸಲು ಆದೇಶಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಶ್ರೀರಾಮ ಸೇನೆ ಮುಖ್ಯಸ್ಥರ ಪ್ರಮೋದ ಮುತಾಲಿಕ, ಜಿಲ್ಲಾಧ್ಯಕ್ಷ ಲೋಕೇಶ ಕಾರಡಗಿ, ಹಿಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ, ಬಸವರಾಜ ಹಾಲಪ್ಪನವರ, ನಿಖಿಲ್ ದೊಗ್ಗಳ್ಳಿ, ಕಿರಣ ಕೊಳ್ಳಿ, ಪ್ರವೀಣ ಶೆಟ್ಟರ್, ಮಹಾಲಿಂಗಸ್ವಾಮಿ ಹಿರೇಮಠ, ಗಿರೀಶ ಶೆಟ್ಟರ್, ಜಗದೀಶ ಕನವಳ್ಳಿ, ಪ್ರಕಾಶ ನೆಲವಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net