ಜಿಲ್ಲಾ ಕಾರಾಗೃಹದ ಮೂವರು ಸಿಬ್ಬಂದಿ ಅಮಾನತು; ವಿಚಾರಣಾಧೀನ ಖೈದಿ ಆತ್ಮಹತ್ಯೆ ಪ್ರಕರಣ, ಕರ್ತವ್ಯ ಲೋಪ ಆರೋಪ

Jilla Karagruha
Published on

ಹಾವೇರಿ: ವಿಚಾರಣಾಧೀಕ ಖೈದಿ ಕೋಟೆಪ್ಪ ಅಂಬಿಗೇರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಆರೋಪದಡಿ ಇಲ್ಲಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದ ಮೂವರು ಸಿಬ್ಬಂದಿಯನ್ನು ಕಾರಾಗೃಹ ಇಲಾಖೆ ಅಮಾನತು ಮಾಡಿ ಆದೇಶಿಸಿದೆ.

ಮುಖ್ಯ ವೀಕ್ಷಕರಾದ ಕೆ.ಡಿ ಮಾದರ, ಎಸ್. ಪ್ರಭು ಹಾಗೂ ವೀಕ್ಷಕ ಅಂಬರೀಶ ಹಾವೇರಿ ಅಮಾನತುಗೊಂಡ ಸಿಬ್ಬಂದಿ.

ಮಾ.3ರಂದು ವಿಚಾರಣಾಧೀನ ಖೈದಿ ಕೋಟೆಪ್ಪ ಅಂಬಿಗೇರ ಜೈಲಿನಲ್ಲಿ ಸ್ಟೋರ್ ರೂಮ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಕೋಟೆಪ್ಪನಿಗೆ ಜೈಲಿನಲ್ಲಿ ಅಡುಗೆ ಮಾಡಲು ನಿಯೋಜಿಸಲಾಗಿತ್ತು. ಸಕ್ಕರೆ ತರಲೆಂದು ಸ್ಟೋರ್ ರೂಮ್‌ಗೆ ಒಬ್ಬನೇ ತೆರಳಿದ್ದ. ಈ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಆತನ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಬೆಳಗಾವಿ ಡಿಐಜಿ ಆದೇಶಿಸಿದ್ದಾರೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ನಾಗರತ್ನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net