ಕೆಇಬಿ ಪಿಂಚಣಿದಾರರ ಹಾವೇರಿ ಜಿಲ್ಲಾ ಸಂಘಕ್ಕೆ ಅವಿರೋಧ ಆಯ್ಕೆ

9 HVR 7
Published on

ಹಾವೇರಿ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ) ಪಿಂಚಣಿದಾರರ ಸಂಘದ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಮಲ್ಲಪ್ಪ ಗಂಗಪ್ಪ ಪಸಾರದ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎನ್.ಕಾಯಕದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಾಗಪ್ಪ ಮುದಿಮಲ್ಲಪ್ಪ ಕಡತಿ, ಕಾರ್ಯದರ್ಶಿಯಾಗಿ ಬಸವಣ್ಣೆಪ್ಪ ಚನ್ನಬಸಪ್ಪ ಬಂಗಾಳಿ, ಸಹಕಾರ್ಯದರ್ಶಿಯಾಗಿ ಕೊಟ್ರೇಶಪ್ಪ ಡಿ. ಮಾಳಿ, ಕೋಶಾಧಿಕಾರಿಯಾಗಿ ನೀಲಪ್ಪ ಗುಡ್ಡಪ್ಪ ಮಣ್ಣಮ್ಮನವರ, ಸದಸ್ಯರಾಗಿ ಚಂದ್ರಶೇಖರ ಸಿ. ತುರಕಾಣಿ, ಕಾಳಶೆಟ್ಟಿ ಕೆ., ಸಹದೇವಪ್ಪ ಎನ್. ಮರೆಣ್ಣನವರ, ಗುಡ್ಡಪ್ಪ ಎಫ್. ನಿಂಬಕ್ಕನವರ, ಗುಡ್ಡಪ್ಪ ಎಂ. ಪುಟ್ಟಣ್ಣನವರ, ಶಕುಂತಲಾ ಡಿ, ಮಾಯಾಚಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಬಿ.ಸಿ.ಬಂಗಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net