ಐದು ಬಣವೆಗಳು ಬೆಂಕಿಗಾಹುತಿ; ಕಾಟೇನಹಳ್ಳಿಯಲ್ಲಿ ಅಗ್ನಿ ಅವಘಡ

12 HVR 2 B
Published on

ಹಾವೇರಿ: ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಐದು ಬಣವೆಗಳು ಭಾನುವಾರ ಬೆಂಕಿಗಾಹುತಿಯಾಗಿವೆ.
ಗ್ರಾಮದ ಸುರೇಶ ದೊಡ್ಡಕುರುಬರ, ನಿಂಗಪ್ಪ ದೊಡ್ಡಕುರುಬರ ಹಾಗೂ ಸಂತೋಷ ದೊಡ್ಡಕುರುಬರ ಎಂಬುವರಿಗೆ ಸೇರಿದ ಬಣವೆಗಳು ಸುಟ್ಟು ಕರಕಲಾಗಿವೆ.
ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿ ಇಟ್ಟಿದ್ದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ನಂತರ ಏಕಾಏಕಿ ಬೆಂಕಿಯ ಕೆನ್ನಾಲಗೆ ಅಕ್ಕಪಕ್ಕದ ಬಣವೆಗಳಿಗೂ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಾವೇರಿ ಅಗ್ನಿಶಾಮಕ ಠಾಣೆಯ ಎರಡು ವಾಹನಗಳೊಂದಿಗೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.
ಅಂದಾಜು 3 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಬಣವೆಗಳು ಹಾನಿಗೀಡಾಗಿವೆ ಎಂದು ಅಗ್ನಿಶಾಮಕ ಠಾಣೆ ಸಿಬ್ಬಂದಿ ಅಂದಾಜಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net