ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ ತಾಲೂಕು ಘಟಕ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ.21 ಹಾಗೂ 22ರಂದು ನಗರದ ಜಿಲ್ಲಾ ಗುರು ಭವನದಲ್ಲಿ 26ನೇ ನಾಡಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.21ರಂದು ಸಂಜೆ 6 ಗಂಟೆಗೆ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನಾಡಹಬ್ಬ ಉದ್ಘಾಟಿಸಲಿದ್ದು, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಡಹಬ್ಬ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಬೆಳವಡಿ ಅಧ್ಯಕ್ಷತೆ ವಹಿಸುವರು. ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕ ಭಾಷಣ ಮಾಡುವರು. ಶಾಸಕ ಬಸವರಾಜ ಶಿವಣ್ಣನವರ, ಸಂಜೀವಕುಮಾರ ನೀರಲಗಿ, ಲಿಂಗಯ್ಯ ಹಿರೇಮಠ, ಮತ್ತಿತರರು ಭಾಗವಹಿಸುವರು. ದಾವಣಗೆರೆಯ ಶಾಂತರಾಜ ಎಸ್.ಜಿ. ‘ಕರ್ನಾಟಕದ ನಾಡು ನುಡಿ, ಪರಂಪರೆ’ ಕುರಿತು ಉಪನ್ಯಾಸ ನೀಡುವರು.
ಅ.22ರಂದು ಸಂಜೆ 6 ಗಂಟೆಗೆ ‘ರಜತ ಮಹೋತ್ಸವ ಹಾದಿಯಲ್ಲಿ ಹಾವೇರಿ ಜಿಲ್ಲೆ’ ಎಂಬ ವಿಷಯದ ಕುರಿತು ಶಿಕ್ಷಕಿ ಗೀತಾ ಸುತ್ತಕೋಟಿ ಉಪನ್ಯಾಸ ನೀಡುವರು. ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ವಿಜಯಕುಮಾರ ಮುದಕಣ್ಣನವರ, ಇತರರು ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಕಾರ್ಯಕ್ರಮದಲ್ಲಿ ಹಲವರನ್ನು ಸನ್ಮಾನಿಸಲಾಗುವುದು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.