ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ; ಎರಡು ದಿನ ಎಂಟೂವರೆ ಸಾವಿರ ಜನರಿಗೆ ಊಟ

10 HVR 3 F
Published on

ಹಾವೇರಿ: ಹಿರೇಕೆರೂರ ಪಟ್ಟಣದಲ್ಲಿ ಎರಡು ದಿನ ಜರುಗಿದ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳೀಯ ಜನಪ್ರತಿನಿಧಿಗಳ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕನ್ನಡ ಪ್ರೇಮಿಗಳ ಸಹಕಾರ ಹಾಗೂ ಶ್ರಮದ ಪರಿಣಾಮ ಯಶಸ್ವಿಯಾಗಿ ಸಂಪನ್ನಗೊಂಡಿತು ಎಂದು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಗೋಷ್ಠಿಗಳಿಗೆ ಕನ್ನಡದ ಮನಸ್ಸುಗಳು ಸಹಕಾರ ನೀಡಿದವು. ಸಿ.ಇ.ಎಸ್ ಶಿಕ್ಷಣ ಸಂಸ್ಥೆ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನದ ಮೊದಲ ದಿನ ಸುಮಾರು ಐದು ಸಾವಿರ ಜನರು ಹಾಗೂ ಎರಡನೇ ದಿನ ಮೂರೂವರೆ ಸಾವಿರ ಜನರು ಊಟ ಮಾಡಿದರು.

ಪುಸ್ತಕ ಮಾರಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದ ಯಶಸ್ಸಿನಲ್ಲಿ ಪೂರಕವಾಗಿದ್ದವು. ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಲಿಂಗಯ್ಯ ಬಿ.ಹಿರೇಮಠ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net