ಕರ್ಜಗಿ ರಾಯರ ಮಠದಲ್ಲಿ ಆರಾಧನಾ ಮಹೋತ್ಸವ ವೈಭವ

22 HVR 9 A
Published on

ಹಾವೇರಿ (ಕರ್ಜಗಿ): ತಾಲೂಕಿನ ಕರ್ಜಗಿ ಗ್ರಾಮದ ರೈಲು ನಿಲ್ದಾಣದ ಬಳಿ ಇರುವ ಶ್ರೀಹರಿ ವಿಠ್ಠಲಾಶ್ರಮದ ಶ್ರೀ ಗುರು ರಾಘವೇಂದ್ರಸ್ವಾಮಿಯವರ ವೃಂದಾವನ ಮಠದಲ್ಲಿ 3 ದಿನಗಳ ಕಾಲ ಶ್ರೀ ರಾಘವೇಂದ್ರಸ್ವಾಮಿಯವರ ಆರಾಧನಾ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಿತು.
ಜೋಶಿ ಗುರುಗಳು ತಮ್ಮ ಅನುಷ್ಠಾನ ಬಲದಿಂದ ರಾಯರ ಸನ್ನಿಧಾನ ಬಯಸಿ ಬಂದವರಿಗೆ ಸಾಧನೆಯ ಮಾರ್ಗ ತೋರಿ ಬೆಳಕು ನೀಡಿ ಉದ್ಧರಿಸಿದ್ದಾರೆ ಎಂದು ಜೋಶಿ ಗುರುಗಳ ವಂಶಜ ಗೋಪಾಲಕೃಷ್ಣ ಭಕ್ತಿಯಿಂದ ಸ್ಮರಣೆ ಮಾಡುತ್ತಾರೆ.
ಹೋಮ-ವಿಶೇಷ ಪೂಜೆ :
ಮಂಗಳವಾರ ಪೂರ್ವಾರಾಧನೆಯಂದು ಶ್ರೀವಿಘ್ನೇಶ್ವರ ಪೂಜೆ, ಗಂಗಾಕಲಶ ಪೂಜೆ, ಗಣಹೋಮ, ಭಜನೆ ನಡೆಯಿತು. ಬುಧವಾರ ಮಧ್ಯಾರಾಧನೆ ದುರ್ಗಾ ಹೋಮ, ರಥೋತ್ಸವ, ಅಷ್ಟಾವಧಾನ ಸಹಿತ ಶಯನೋತ್ಸವ ನಡೆಯಿತು. ಗುರುವಾರ ಉತ್ತರ ಆರಾಧನೆಯಂದು ಶ್ರೀಸೂಕ್ತ ಹೋಮ, ಪವಮಾನ ಹೋಮ, ದುರ್ಗಾಪೂಜೆ ನಡೆದವು. ನಿತ್ಯವೂ ಪ್ರಾತಃಕಾಲದಲ್ಲಿ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪುರುಷಸೂಕ್ತ, ಅಷ್ಟೋತ್ತರ, ಪುಷ್ಪಾಲಂಕಾರ ಮಹಾಪೂಜೆಗಳು ಜರುಗಿದವು. ಸಂಜೆ ಸುಚೇತಾ ಸೊರಟೂರ ಹಾಗೂ ವಸುಧಾ ಸಿದ್ದಾಪೂರ ಅವರು ಭರತನಾಟ್ಯ ಪ್ರಸ್ತುತಪಡಿಸಿದರು.
ಗೋಪಾಲಕೃಷ್ಣರಾವ್, ಪದ್ಮರಾಜ ಆಚಾರ್ಯ, ವಿಶ್ವನಾಥ ಹೆಬ್ಬಾರ, ಪ್ರಶಾಂತ ಚೀಟಿನೀಸ್, ರವೀಂದ್ರರಾವ್, ರಾಮಚಂದ್ರ ಉಚ್ಚಿಲ, ರಮೇಶರಾವ್, ರಾಜೇಶರಾವ್, ಸುಭಾಸ ದೇಶಪಾಂಡೆ, ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮುಂಡಗೋಡ, ಗದಗ, ಹಾವೇರಿ, ಬೆಂಗಳೂರು, ಮತ್ತಿತರ ಭಾಗಗಳಿಂದ ಆಗಮಿಸಿದ್ದ ಭಕ್ತರು ಗುರುರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಮೂರು ದಿನಗಳ ಕಾಲ ಅನ್ನಸಂತರ್ಪಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net