ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳಲು ಮಕ್ಕಳ ಸಾಹಿತ್ಯ ಸಂಭ್ರಮ ವೇದಿಕೆ; ಕರ್ಜಗಿಯಲ್ಲಿ ಬಿಇಒ ಮೌನೇಶ ಬಡಿಗೇರ ಹೇಳಿಕೆ

20 HVR 2
Published on

ಹಾವೇರಿ: ಸಾಹಿತ್ಯದ ಅಭಿರುಚಿ, ಭಾಷಾ ಪ್ರೌಢಿಮೆಯನ್ನು ಬೆಳಸಿಕೊಳ್ಳಲು ಮಕ್ಕಳ ಸಾಹಿತ್ಯ ಸಂಭ್ರಮ ಒಂದು ದೊಡ್ಡ ವೇದಿಕೆ ಆಗಲಿದೆ. ನಾಡು ನುಡಿಯ ಅಭಿಮಾನದ ಜತೆಗೆ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಇದೊಂದು ಅಪರೂಪದ ಪ್ರಯತ್ನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದರು.
ತಾಲೂಕಿನ ಕರ್ಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ‘ಮಕ್ಕಳ ಸಾಹಿತ್ಯ ಸಂಭ್ರಮ- 2024’ ಕಾರ್ಯಕ್ರಮಕ್ಕೆ ಮಕ್ಕಳೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಮಿತಿ ಸದಸ್ಯೆ ಮತ್ತು ಜಿಲ್ಲಾ ಸಂಚಾಲಕಿ ರೇಣುಕಾ ಗುಡಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂರು ದಿನಗಳ ಕಾಲ ನಡೆದ ಸಾಹಿತ್ಯ ಸಂಭ್ರಮದಲ್ಲಿ ಕರ್ಜಗಿ ಕೋಳೂರು ಹಾಗೂ ಕಾಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯ 100 ಮಕ್ಕಳು ಪಾಲ್ಗೊಂಡಿದ್ದರು.
ಕರ್ಜಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಕಳ್ಳಿಹಾಳ, ಉಪಾಧ್ಯಕ್ಷೆ ಜಯಶ್ರೀ ಚಿಗರಿ, ಎಸ್.ಎಂ.ಕುಲಕರ್ಣಿ, ಯಶವಂತ ಬಿಷ್ಟನಗೌಡರ, ಮಲ್ಲಣ್ಣ ತಿಮ್ಮಣ್ಣನವರ, ಶಿಕ್ಷಣ ಸಂಯೋಜಕ ಎಸ್.ಆರ್.ಹಿರೇಮಠ, ಸಾಹಿತಿ ಸತೀಶ ಕುಲಕರ್ಣಿ, ಚಂದ್ರಣ್ಣ ಮಾಳಶೆಟ್ಟಿ, ಬೀರಪ್ಪ ಮಾನೇಗಾರ, ಶಿಕ್ಷಣ ಸಂಯೋಜಕ ಎಂ.ಎಫ್.ಭಗವಂತಗೌಡರ, ಗ್ರಂಥಪಾಲಕ ಬೀರಪ್ಪ ಮಾನೇಗಾರ, ಸರ್ವೇಶ ಡೊಂಕಣ್ಣನವರ, ಜಿಲ್ಲಾ ಸಮಿತಿಯ ಮಾಲತೇಶ ಕರ್ಜಗಿ, ಜ್ಯೋತಿ ಬಶೆಟ್ಟಿಯವರ, ಈರಣ್ಣ ಬೆಳವಡೆ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ., ಮತ್ತಿತರರು ಉಪಸ್ಥಿತರಿದ್ದರು.
ಕೆ.ಆರ್. ಹಿರೇಮಠ ಮತ್ತು ಮಕ್ಕಳು ಗೀಗೀ ಪದ ಹಾಡಿದರು. ಪಿಡಿಒ ಈಶ್ವರಪ್ಪ ಸ್ವಾಗತಿಸಿದರು. ಎಸ್.ಎಲ್ ಆಚಾರ್ ವಂದಿಸಿದರು. ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಜಿ.ಎಂ.ಓಂಕಾರಣ್ಣನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net