ತಂಬಾಕು ಸೇವಿಸಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ !

Published on

ಹಾವೇರಿ: ತಂಬಾಕು ಸೇವನೆ ಮಾಡಬೇಡ ಎಂದು ಪಾಲಕರು ಬುದ್ದಿ ಮಾತು ಹೇಳಿದ್ದಕ್ಕೆ 18 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೀಬಿಜಾನ್ ಮರ್ದನ್‌ಸಾಬ ಸೊಂಡಿ ಮೃತಪಟ್ಟ ಯುವತಿ. ಬೀಬಿಜಾನ್ ಕೆಲ ದಿನಗಳಿಂದ ತಂಬಾಕು ಸೇವಿಸುತ್ತಿದ್ದಳು. ತಂಬಾಕು ಸೇವನೆ ಬಿಟ್ಟುಬಿಡು ಎಂದು ಪಾಲಕರು ಬುದ್ದಿ ಹೇಳಿದ್ದರು. ಆದರೂ ಆಕೆ ಮನೆಯವರಿಗೆ ತಿಳಿಯದೇ ತಂಬಾಕು ಸೇವಿಸುತ್ತಿದ್ದಳು. ಫೆ.11ರಂದು ಮತ್ತೆ ತಂಬಾಕು ಸೇವಿಸಿದ್ದನ್ನು ನೋಡಿದ ಪಾಲಕರು ಬುದ್ದಿವಾದ ಹೇಳಿದ್ದರು. ಇಷ್ಟಕ್ಕೆ ಬೇಸರ ಮಾಡಿಕೊಂಡ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net