ಕರ್ಜಗಿಯಲ್ಲಿ ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ; ತಪ್ಪಿದ ಅನಾಹುತ, ದನ- ಕರುಗಳ ರಕ್ಷಣೆ

15 HVR 3
Published on

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಹೊರ ವಲಯದ ಹೊಲವೊಂದರಲ್ಲಿ ಸಿಡಿಲು ಬಡಿದ ಪರಿಣಾಮ ಗುಡಿಸಲು ಸುಟ್ಟು ಕರಕಲಾದ ಘಟನೆ ಗುರುವಾರ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚನ್ನವ್ವ ಶಿವಪ್ಪ ಅಣ್ಣಿ ಎಂಬುವರು ಹೊಲದ ಗುಡಿಸಿಲಲ್ಲಿ ದನ, ಕರುಗಳನ್ನು ಕಟ್ಟಿದ್ದರು. ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತುತ್ತಿದ್ದಂತೆ ಪಕ್ಕದಲ್ಲಿದ್ದವರು ದನ ಕರುಗಳನ್ನು ಹೊರಗೆ ಸಾಗಿಸಿ, ರಕ್ಷಣೆ ಮಾಡಿದ್ದಾರೆ. ಕೃಷಿ ಉಪಕರಣ ಸೇರಿ, ಇತರ ವಸ್ತುಗಳು ಸುಟ್ಟು ಕರಕಲಾಗಿವೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net