ಕ್ರೀಡಾಕೂಟದಲ್ಲಿ ಕೂರಗುಂದ ಶಾಲಾ ಮಕ್ಕಳ ಸಾಧನೆ

22 HVR 5
Published on

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕೂರಗುಂದ ಗ್ರಾಮದ ಪಿಎಂಶ್ರೀ ಆರ್‌ಎಂಎಸ್‌ಎ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ ವೈಯಕ್ತಿಕ ಆಟಗಳಲ್ಲಿ 100 ಮೀ. ಓಟದಲ್ಲಿ ಪ್ರಥಮ, 200ಮೀ ಓಟದಲ್ಲಿ ದ್ವಿತೀಯ, 200 ಮೀ. ಓಟದಲ್ಲಿ ತೃತೀಯ, ಎತ್ತರ ಜಿಗಿತದಲ್ಲಿ ಪ್ರಥಮ, ಗುಂಡುಎಸೆತದಲ್ಲಿ ದ್ವಿತೀಯ, 600 ಮೀ. ಓಟದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ಅಡತಡೆ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕರ ಗುಂಪು ಆಟಗಳಾದ ಕಬಡ್ಡಿ ಪ್ರಥಮ, ಖೋಖೋ ದ್ವಿತೀಯ, ರೀಲೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವೈಯಕ್ತಿಕ ಆಟಗಳಲ್ಲಿ 600ಮೀ ಓಟದಲ್ಲಿ ಪ್ರಥಮ, 200ಮೀ ಓಟದಲ್ಲಿ ದ್ವಿತೀಯ, ಅಡತಡೆ ಓಟದಲ್ಲಿ ಪ್ರಥಮ, ಚಕ್ರಎಸೆತದಲ್ಲಿ ತೃತೀಯ ಹಾಗೂ ಬಾಲಕಿಯರ ಗುಂಪು ಆಟಗಳಾದ ಖೋಖೋ ಪ್ರಥಮ, ಕಬ್ಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೊಪಾಧ್ಯಯೆ ಬಿ.ಎಸ್.ಸಂಕಣ್ಣನವರ, ಎಸ್‌ಡಿಎಂಸಿ ಅಧ್ಯಕ್ಷ ಭೀಮಣ್ಣ ಹೊಟ್ಟೆಪ್ಪನವರ, ಉಪಾಧ್ಯಕ್ಷೆ ರೇಣುಕಾ ವಡ್ಡರ, ಸದಸ್ಯರು, ಶಾಲಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net