ಡಾ.ಲಿಂಗದಹಳ್ಳಿ ಹಾಲಪ್ಪ ಅವರಿಗೆ ಕನಕಶ್ರೀ ಪ್ರಶಸ್ತಿ

25 Dr.Lingadahalli Halappa
Published on

ಹಾವೇರಿ: ತಾಲೂಕಿನ ಕುಗ್ರಾಮ ಭರಡಿ ಮೂಲದ, ಕೆಇಬಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಡಾ.ಲಿಂಗದಹಳ್ಳಿ ಹಾಲಪ್ಪ ಅವರಿಗೆ 2021-22ರ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದ ಕನಕಶ್ರೀ ಪ್ರಶಸ್ತಿ ದೊರೆತಿದೆ.
ಫೆಬ್ರವರಿ 3, 1958ರಲ್ಲಿ ಭರಡಿ ಗ್ರಾಮದಲ್ಲಿ ಜನಿಸಿದ ಹಾಲಪ್ಪ ಅವರು ಬಿಇ (ಮೆಕ್ಯಾನಿಕಲ್), ಎಂಬಿಎ, ಎಂಎ (ಕನ್ನಡ) ಪದವಿ ಪಡೆದಿದ್ದಾರೆ. ಹಂಪಿ ಕನ್ನಡ ವಿವಿಯಲ್ಲಿ ‘ಗ್ರಾಮ ನಗರಗಳ ದ್ವಂದ್ವಾತ್ಮಕತೆ’ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.
ದಾಸ ಶ್ರೇಷ್ಠ ಕನಕದಾಸರ ಕುರಿತ ‘ಕನಕದಾಸರು ಮತ್ತು ಸರ್ವಜ್ಞ’ ಸಂಶೋಧನಾ ಪ್ರಬಂಧ, ‘ಕನಕ ಹೊರಗೆ ನಿಂತಿದ್ದಾನೆ’ ಕವನ ಸಂಕಲನ, ಸೇರಿದಂತೆ 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ನಾಡಿನಾದ್ಯಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಸಂಕ್ರಮಣ ಕಾವ್ಯ ಪ್ರಶಸ್ತಿ, ಕುಮಾರರಾಮ ಕಥಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net