ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Kalika Devi
Published on

ಹಾವೇರಿ: ಇಲ್ಲಿನ ದ್ಯಾಮವ್ವನ ಗುಡಿ ಓಣಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ದಸರಾ ಅಂಗವಾಗಿ ವಿಶೇಷ ನವರಾತ್ರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.15ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಘಟಸ್ಥಾಪನೆ, ದೀಪಾರಾಧನೆ ಜರುಗಲಿದೆ. ಅ.22ರಂದು ದುರ್ಗಾಷ್ಟಮಿ, ಅ.23ರಂದು ಆಯುಧಪೂಜೆ, ಸರಸ್ವತಿ ಪೂಜೆ, ಮಹಾನವಮಿ, ಅ.24ರಂದು ಸೀಮೋಲ್ಲಂಘನೆ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸಂಜೆ 5 ಗಂಟೆಗೆ ಶ್ರೀ ಗಾಯತ್ರಿ ಭಜನಾ ಮಂಡಳಿಯಿಂದ ಶ್ರೀದೇವಿಗೆ ಕುಂಕುಮಾರ್ಚನೆ ನೆರವೇರಲಿದೆ. ಶ್ರೀ ಶಕ್ತಿ ಮಹಿಳಾ ಮಂಡಳದಿಂದ 3ರಿಂದ 6 ವರ್ಷದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಅ.29ರಂದು ಮಧ್ಯಾಹ್ನ 1 ಗಂಟೆಗೆ ಪ್ರಸಾದ ಸೇವೆ ಇರಲಿದೆ ಎಂದು ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿದಿನ ‘ಶ್ರೀದೇವಿ ಪುರಾಣ’
ಶ್ರೀಕ್ಷೇತ್ರ ವರವಿಯ ಶ್ರೀ ಮಹೇಶಾಚಾರ ಶ್ರೀಶೈಲಾಚಾರ ಪುರೋಹಿತರ ನೇತೃತ್ವದಲ್ಲಿ ಪ್ರತಿದಿನ ರಾತ್ರಿ 7 ಗಂಟೆಯಿಂದ 9ರವರೆಗೆ ‘ಶ್ರೀದೇವಿ ಪುರಾಣ’ ಕಾರ್ಯಕ್ರಮ ಜರುಗಲಿದೆ. ಗಾಯತ್ರಿ ಭಜನಾ ಮಂಡಳಿ ಹಾಗೂ ಶ್ರೀ ಶಕ್ತಿ ಮಹಿಳಾ ಮಂಡಳಿ ಸಂಗೀತ ಸೇವೆ ನೀಡಲಿದೆ. ಈಶ್ವರ ಬಡಿಗೇರ ತಬಲಾ ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net