

ಹಾವೇರಿ: ಇಲ್ಲಿನ ದ್ಯಾಮವ್ವ ಗುಡಿ ಓಣಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಅ.3ರಿಂದ ಅ.12ರವರೆಗೆ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಅ.3ರಂದು ಬೆಳಗ್ಗೆ 8 ಗಂಟೆಗೆ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಘಟಸ್ಥಾಪನೆ ದೀಪಾರಾಧನೆ ಜರುಗಲಿದೆ. ಅ.10ರಂದು ದುರ್ಗಾಷ್ಟಮಿ, ಅ.11ರಂದು ಆಯುಧಪೂಜೆ, ಸರಸ್ವತಿ ಪೂಜೆ, ಮಹಾನವಮಿ, ಅ.12ರಂದು ವಿಜಯದಶಮಿ ಸೀಮೋಲ್ಲಂಘನೆ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿವೆ. ಅ17ರಂದು ಮಧ್ಯಾಹ್ನ ಅನ್ನ ಪ್ರಸಾದ ಸೇವೆ ಜರುಗಲಿದೆ.
ಪ್ರತಿದಿನ ಸಂಜೆ 5ರಿಂದ 6ರವರೆಗೆ ಗಾಯತ್ರಿ ಭಜನಾ ಮಂಡಳಿಯಿಂದ ಶ್ರೀದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ಶಕ್ತಿ ಮಹಿಳಾ ಮಂಡಳಿಯಿಂದ ಅ.13ರಂದು 3ರಿಂದ 6 ವರ್ಷದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ನಡೆಯಲಿವೆ ಎಂದು ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
ಶ್ರೀದೇವಿ ಪುರಾಣ ಪ್ರವಚನ
ಪ್ರತಿದಿನ ರಾತ್ರಿ 7ರಿಂದ 9ರವರೆಗೆ ಮಹೇಶಾಚಾರ್ ಶ್ರೀಶೈಲಾಚಾರ್ ಪುರೋಹಿತರಿಂದ ಶ್ರೀದೇವಿ ಪುರಾಣ ಪ್ರವಚನ ನಡೆಯಲಿದೆ. ಗಾಯತ್ರಿ ಭಜನಾ ಮಂಡಳಿ, ಶಕ್ತಿ ಭಜನಾ ಮಂಡಳಿ ಹಾಗೂ ಈಶ್ವರ ನೀಲಕಂಠಪ್ಪ ಬಡಿಗೇರ ತಬಲಾ ಸಾಥ್ ನೀಡಲಿದ್ದಾರೆ.