ಕಲಾ ಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನ

Published on

ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಕ್ಕಳು ಮತ್ತು ಯುವ ಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಲು ಹಾಗೂ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಏಕ ವ್ಯಕ್ತಿ ಸ್ಪರ್ಧೆಗಳು: ಬಾಲ ಪ್ರತಿಭೆ ಸ್ಪರ್ಧೆಗೆ 8ರಿಂದ 14 ವರ್ಷದೊಳಗಿನ ಹಾಗೂ ಕಿಶೋರ ಪ್ರತಿಭೆಗೆ 14ರಿಂದ 18 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ ಹಾಗೂ ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾಪ್ರಕಾರ ಜರುಗಲಿವೆ.

ಯುವ ಪ್ರತಿಭೆ ಸ್ಪರ್ಧೆಗೆ 18ರಿಂದ 30 ವರ್ಷದೊಳಗಿನವರು ಭಾಗವಹಿಸಬಹುದು, ನನ್ನ ನೆಚ್ಚಿನ ಸಾಹಿತಿ(ಆಶುಭಾಷಣ),ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿತ್ರಕಲೆ ಹಾಗೂ ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ ಕಲಾಪ್ರಕಾರಗಳಿಗೆ ಸ್ಪರ್ಧೆ ಜರುಗಲಿದೆ. ಸಮೂಹ ಸ್ಪಧೆ: ಸಮೂಹ ಸ್ಪರ್ಧೆಯಲ್ಲಿ ನಾಟಕ ಪ್ರದರ್ಶಿಸಬಹುದು, 10ರಿಂದ 15 ಸದಸ್ಯರು ಭಾಗವಹಿಸಬಹುದು.

ನ.15 ಅಥವಾ 26ರಂದು ಸ್ಪರ್ಧೆ ಜರುಗುವ ಸಾಧ್ಯತೆ ಇದೆ. ಜಿಲ್ಲಾ ಮಟ್ಟದ ವಿಜೇತರು ವಲಯ ಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ. ಸ್ಪರ್ಧೆಗೆ ಬೇಕಾಗುವ ವಾದ್ಯ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು, ಒಬ್ಬ ಸ್ಪರ್ಧಿಯು ಒಂದಕ್ಕಿಂತ ಹೆಚ್ಚಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಆಸಕ್ತರು ಸ್ವ ವಿವರದ ಅರ್ಜಿಯನ್ನು ನ.21ರೊಳಗಾಗಿ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, 32.’ಬಿ’ ಬ್ಲಾಕ್ ಹಾವೇರಿ ಇಲ್ಲಿಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net