

ಹಾವೇರಿ: ಕಾಗಿನೆಲೆ ಪೀಠದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಕಾಲತ್ತು ವಹಿಸಿದರೆ ಅವರ ತಲೆದಂಡವಾಗುತ್ತದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ ಹೇಳಿಕೆ ಖಂಡನೀಯ. ಈ ಕೂಡಲೇ ಎಚ್.ವಿಶ್ವನಾಥ ಅವರು ಶ್ರೀಗಳ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಎಲ್ಲೆಡೆ ಹೋರಾಟ ವಾಡಲಾಗುವುದು ಎಂದು ಬ್ಯಾಡಗಿ ಶಾಸಕ ಹಾಗೂ ಕನಕಗುರು ಪೀಠದ ಟ್ರಸ್ಟಿ ಬಸವರಾಜ ಶಿವಣ್ಣನವರ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿದ ಅವರು, ಕಾಗಿನೆಲೆ ಕನಕ ಗುರುಪೀಠವನ್ನು ರಾಜ್ಯದ ಸಮಸ್ತ ಕುರುಬ ಸವಾಜ ಸೇರಿ 1992ರಲ್ಲಿ ಸ್ಥಾಪಿಸಿದೆ. ಈಗಿನ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಕುರುಬ ಸವಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಉತ್ತಮವಾಗಿ ಸವಾಜ ಸಂಟನೆ ವಾಡಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಶಾಖಾ ಮಠಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಐಎಎಸ್, ಕೆಎಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಶ್ರೀಗಳು ಸುವಾರು 200 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವಷ್ಟು ಮಠಕ್ಕೆ ಆಸ್ತಿ ವಾಡಿದ್ದಾರೆ. ಆದರೆ, ವಾಜಿ ಸಚಿವರೂ ಆದ ಎಂಎಲ್ಸಿ ಎಚ್.ವಿಶ್ವನಾಥ ಅವರು ಸೆ.16ರಂದು ಸ್ವಾಮೀಜಿ ಅವರನ್ನು ಮಠದಿಂದ ಕಿತ್ತು ಹಾಕಲಾಗುವುದು ಎಂದು ಹೇಳಿದ್ದಾರೆ. ಮಠದಿಂದ ಶ್ರೀಗಳನ್ನು ಕಿತ್ತುಹಾಕಲು ವಿಶ್ವನಾಥ ಯಾರು..? ಇಂಥ ಹೇಳಿಕೆ ನೀಡಲು ಇವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಮಠ ಕಟ್ಟಲು ವಿಶ್ವನಾಥ ಒಬ್ಬರೇ ಶ್ರಮ ಪಟ್ಟಿಲ್ಲ, ಪ್ರತಿಯೊಬ್ಬ ಕುರುಬ ಸವಾಜದ ವ್ಯಕ್ತಿಯ ಕೊಡುಗೆ ಇದೆ. ಸಿಎಂ ಸಿದ್ದರಾಮಯ್ಯನವರ ಬಗ್ಗೆಯೂ ಎಚ್.ವಿಶ್ವನಾಥ ಹಗುರವಾಗಿ ವಾತನಾಡಿದ್ದು ಸರಿಯಲ್ಲ, ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಡಳಿತವನ್ನು ರಾಜ್ಯದ ಸರ್ವಜನಾಂಗವೇ ಒಪ್ಪಿಕೊಂಡಿದೆ. ಎಲ್ಲರೂ ಅವರನ್ನು ಗೌರವಿಸುತ್ತಾರೆ. ಅವರ ಬಗ್ಗೆ ವಿಶ್ವನಾಥ ಆಡಿರುವ ಗರ್ವದ ವಾತುಗಳನ್ನು ಸವಾಜ ಒಪ್ಪುವುದಿಲ್ಲ. ವಿಶ್ವನಾಥ ಈ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.
ಸವಾಜವನ್ನು ಸಂಟಿಸುವ ನಿಟ್ಟಿನಲ್ಲಿ ರಾಜಕೀಯವಾಗಿ ರಾಜಕಾರಣಿಗಳು ಸಹಾಯ, ಸಹಕಾರ ನೀಡುವುದಷ್ಟೆ ನಮ್ಮ ಕೆಲಸ. ಮಠ ಬೆಳೆಯಲು ರಾಜಕೀಯ ಬೇಕೇ ಹೊರತು ಮಠದಲ್ಲಿ ರಾಜಕೀಯ ಬರಬಾರದು. ಗುರುಗಳ ಬಗ್ಗೆ ಅಗೌರವದಿಂದ ವಾತನಾಡುವ ಮೂಲಕ ಎಚ್.ವಿಶ್ವನಾಥ ಅವರು ತಪ್ಪಾಗಿ ವಾತನಾಡಿದ್ದಾರೆ. ಮಠ ಸ್ಥಾಪಿಸುವ ವೇಳೆ ವಿಶ್ವನಾಥ ಅವರನ್ನು ಸವಾಜ ಅಧ್ಯಕ್ಷರನ್ನಾಗಿ ಆಯ್ಕೆ ವಾಡಿತ್ತು. ಈಗಾಗಲೇ ವಿಶ್ವನಾಥರಿಗೆ ವಯಸ್ಸಾಗಿದೆ. ಇರುವಷ್ಟು ದಿನ ಗೌರವ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಠದ ಟ್ರಸ್ಟಿ ಎಸ್.ಎಫ್.ಎನ್.ಗಾಜಿಗೌಡ್ರ, ರಾಜೇಂದ್ರ ಹಾವೇರಣ್ಣವರ, ಶಂಕ್ರಣ್ಣ ವಾತನವರ, ಎಂ.ಎ.ಗಾಜೀಗೌಡ್ರ, ಆನಂದ ಹುಲಬನ್ನಿ, ಚಿಕ್ಕಣ್ಣ ಹಾದಿಮನಿ, ಹನುಮಂತಪ್ಪ ಕಂಬಳಿ, ಯಶವಂತ ಯಡಗೋಡಿ, ಫಕ್ಕೀರಪ್ಪ ಕುಂದೂರ, ಮೃತ್ಯುಂಜಯ ಗುದಗೇರಿ, ಇತರರಿದ್ದರು.