

ಹಾವೇರಿ: ಜಿಲ್ಲೆಯ ವಿವಿಧೆಡೆ ಸಿಡಿಲು, ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಬ್ಯಾಡಗಿ ತಾಲೂಕು ತಿಮಕಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಯುವಕ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ತಾಲೂಕಿನ ಕುರುಬಗೊಂಡ ನಿವಾಸಿ ದಯಾನಂದ ಹನುಮಂತಗೌಡ ಪುಟ್ಟನಗೌಡ್ರ (20) ಸಿಡಿಲಿಗೆ ಬಲಿಯಾದವ. ಬ್ಯಾಡಗಿ ತಾಲೂಕಿನ ತಿಮಕಾಪುರ ಗ್ರಾಮದ ಬಳಿ ಹೊಲದಲ್ಲಿ ದಯಾನಂದ ಮೋಟಾರ್ ಆಫ್ ಮಾಡಲು ತೆರಳಿದಾಗ ಭಾರಿ ಗಾಳಿ, ಗುಡುಗು ಶುರುವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಪಕ್ಕದ ಬೇವಿನಮರದಡಿ ನಿಂತಿದ್ದಾಗ ದಯಾನಂದನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಧಾವಿಸಿದ ಕಾಗಿನೆಲೆ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.