ಕಬ್ಬೂರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ನಿವೇದಿತಾ ರಾಜ್ಯಮಟ್ಟಕ್ಕೆ ಆಯ್ಕೆ

24 HVR 4
Published on

ಹಾವೇರಿ: ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ತಾಲೂಕಿನ ಕಬ್ಬೂರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ನಿವೇದಿತಾ ಬಡಿಗೇರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಅಕ್ಕಿಆಲೂರಿನ ನರಸಿಂಗರಾವ್ ದೇಸಾಯಿ ಪಿಯು ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ನಿವೇದಿತಾ ವಿಜೇತರಾಗಿದ್ದರು. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಪ್ರಾಚಾರ್ಯ ಆನಂದ ಹಂಡೆ, ಉಪನ್ಯಾಸಕರಾದ ಅಶೋಕ ಕಹಾರ, ಎಫ್.ಎಂ.ಅನ್ಸಾರಿ, ಜಿ.ಎಚ್.ವಾಲ್ಮೀಕಿ, ಎಚ್.ಡಿ.ಗಂಟೇರ, ರಮೇಶ ಲಮಾಣಿ, ಬಿ.ಬಿ.ಕುರಬರ ಹಾಗೂ ಇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net