ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನ; ಹಾವೇರಿ ಕಾ ರಾಜಾ ಗಣೇಶ ವಿಸರ್ಜನೆ; ಬೃಹತ್ ಶೋಭಾಯಾತ್ರೆ

16 HVR 11 A
Published on

ಹಾವೇರಿ: ನಗರದ ಸುಭಾಷ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಹಾವೇರಿ ಕಾ ರಾಜಾ ಗಣೇಶನ ವಿಸರ್ಜನೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಯುವಕ- ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಮಧ್ಯಾಹ್ನ ಸುಭಾಷ ವೃತ್ತದಿಂದ ಆರಂಭವಾದ ಮೆರವಣಿಗೆ ಎಂಜಿ ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ಸಾಗಿತು. ಡಿಜೆ ಹಾಡುಗಳಿಗೆ ಯುವಕರು ಭರ್ಜರಿ ಹೆಜ್ಜೆ ಹಾಕಿದರು. ಕೇಸರಿ ಶಾಲು ಧರಿಸಿದ್ದ ಯುವಕರು, ಭಾಗವಾ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಬಳಿಕ ವರದಾ ನದಿಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net