ರಾಣೆಬೆನ್ನೂರಲ್ಲಿ ಉದ್ಯೋಗ ಮೇಳ 26ರಂದು

Published on

ಹಾವೇರಿ: ವಿಕಲಚೇತನ ಹಾಗೂ ಇತರೆ ಯುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದಧಾರವಾಡದ ಸಮರ್ಥನಂ ವಿಕಲಚೇತನ ಸಂಸ್ಥೆ ರಾಣೆಬೆನ್ನೂರಿನ ಆರ್‌ಟಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್ ಸಹಯೋಗದಲ್ಲಿ ಅ.26ರಂದು ಬೆಳಗ್ಗೆ 9 ಗಂಟೆಗೆ ಆರ್‌ಟಿಇಎಸ್ ಕಾಲೇಜ್‌ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಮರ್ಥನಂ ಸಂಸ್ಥೆಯ ಟ್ರಸ್ಟಿ ಉದಯಕುಮಾರ ಭಾಗಣ್ಣನವರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯೊಂದಿಗೆ 18ರಿಂದ 35 ವರ್ಷದ ಒಳಗಿನವರು ಮೇಳದಲ್ಲಿ ಭಾಗವಹಿಸಬಹುದು. ಬಿಪಿಒ, ಸಾಫ್ಟ್‌ವೇರ್, ಮ್ಯಾನುಫ್ಯಾಕ್ಚರಿಂಗ್, ರಿಟೇಲ್, ಬ್ಯಾಂಕಿಂಗ್, ಇನ್ಸುರೆನ್ಸ್, ಮೆಡಿಕಲ್, ಫೈನಾನ್ಸಿಯಲ್, ಮಾರ್ಕೆಟಿಂಗ್, ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸಂಸ್ಥೆಯ ಪ್ರಾದೇಶಿಕ ಮ್ಯಾನೇಜರ್ ಕೃಷ್ಣಾ ಲಮಾಣಿ ಮಾತನಾಡಿ, ಅಂಗವಿಕಲರು ಹಾಗೂ ಸಾಮಾನ್ಯ ಅಭ್ಯರ್ಥಿಗಳೂ ಮೇಳದಲಿ ಭಾಗವಹಿಸಬಹುದು. ಉದ್ಯೋಗಾಸಕ್ತರು 3 ಬಯೋ ಡೇಟಾ ಪ್ರತಿಗಳು, 3 ಪಾಸ್‌ಪೋರ್ಟ್ ಸೈಜಿನ ಫೋಟೋ, ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿಗಳು, ಅಂಗವಿಕಲರ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ತರಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಸಿ.ಎ.ಹರಿಹರ, ಡಾ.ಆನಂದ ಖಾನಪೇಟ, ಡಾ.ಮಧುಕುಮಾರ, ಬಿ.ಕೆ.ಕಾಟೇನಹಳ್ಳಿ, ಟಿ.ಜಿ.ಮಾಳಮ್ಮನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net