ಶ್ರೀ ಮಲ್ಲನಗೌಡ ಚ. ಮುಂದಿನಮನಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Published on

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದ ಶ್ರೀ ಹುತ್ತಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಮಲ್ಲನಗೌಡ ಚ. ಮುಂದಿನಮನಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಶಾಲೆಯ ಆಡಳಿತ ಮಂಡಳಿ ಸದಸ್ಯ ವೀರಭದ್ರಗೌಡ ಮುಂದಿನಮನಿ, ಮುಖ್ಯೋಪಾಧ್ಯಾಯ ಸುರೇಶ ವಿಜಾಪುರ, ಸಹ ಶಿಕ್ಷಕರಾದ ಶಿವಯೋಗಿ ಚಕ್ರಸಾಲಿ, ಶಿವಕುಮಾರ ಚಿಕ್ಕಮಠ, ಮಹೇಶ ತಳ್ಳಳ್ಳಿ, ಶರಣಪ್ಪ ನೀರಲಗಿ, ಮಕ್ಕಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net