ಭ್ರಷ್ಟ ರಾಜ್ಯ ಸರ್ಕಾರ ವಜಾಗೊಳಿಸಿ; ರಾಜ್ಯಪಾಲರಿಗೆ ಜೆಡಿಎಸ್ ಜಿಲ್ಲಾ ಘಟಕದಿಂದ ಮನವಿ

3 HVR 3
Published on

ಹಾವೇರಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದ್ದು ಎಸ್.ಟಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಿದೆ. ಎಸ್.ಸಿ, ಎಸ್.ಟಿ ಜನಾಂಗದ ಬಡವರ ಜೀವನವನ್ನು ನಿರ್ಣಾಮ ಮಾಡಲು ಮುಂದಾಗಿರುವ ಈ ಸರ್ಕಾರವನ್ನು ತಕ್ಷಣವೇ ವಜಾಗೊಳಿಸುವಂತೆ ಜೆಡಿಎಸ್ ಜಿಲ್ಲಾ ಘಟಕ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಒತ್ತಾಯಿಸಿದೆ.
ಇಲ್ಲಿನ ದೇವಗಿರಿ ಜಿಲ್ಲಾಡಳಿತ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದ ಜೆೆಡಿಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಹೇಳಿ ಆಡಳಿತಕ್ಕೆ ಬಂದು ಒಂದು ವರ್ಷ ಕಳೆಯುತ್ತಿದ್ದಂತೆ ಎಸ್.ಟಿ ನಿಗಮದ 187 ಕೋಟಿ ಹಣ ಲೂಟಿ ಮಾಡಿದೆ. ಒಂದು ತಿಂಗಳ ಕಳೆದರೂ ಈವರೆಗೂ ಯಾರಿಗೂ ಶಿಕ್ಷೆಯಾಗದೇ ಇನ್ನು ತನಿಖಾ ಹಂತದಲ್ಲಿ ಇಡಲಾಗಿದೆ. ಇತರ ನಿಗಮಗಳಲ್ಲಿಯೂ ಹಗರಣಗಳಾಗಿವೆ. ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿರುವ ಈ ಸರ್ಕಾರವನ್ನು ವಜಾಗೊಳಿಸಬೇಕು. 187 ಕೋಟಿ ರೂ. ವಸೂಲಿ ಮಾಡಿ, ಜನಾಂಗದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿದ್ದಬಸಪ್ಪ ಯಾದವ, ಮಂಜುನಾಥ ಕನ್ನಾಯ್ಕನವರ, ಅಲ್ತಾಫ್ ನದಾಪ್, ರಾಮನಗೌಡ್ರ ಪಾಟೀಲ, ಸತೀಶ ಮಾಳದಕರ, ಈರಣ್ಣ ನವಲಗುಂದ, ರಮೇಶ ಮಾಕನೂರ, ಮೋಹನ ಬಿನ್ನಾಳ, ರೀಠಾ ನಾಯ್ಕರ, ಎಂ.ಎಸ್.ಹಣಗಿ, ಲಲಿತಾ ಉಜ್ಜನಗೌಡ್ರ, ಭರಮಣ್ಣ ಬಿ.ಸಿ., ಸಿದ್ದಣ್ಣ ಗುಡಿಮುಂದ್ಲರ, ಅಮೀರಜಾನ್ ಬೇಪಾರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net