ಸಸಿಗಳ ಪಾಲನೆ ಮಾಡುವುದು ಮುಖ್ಯ

8 HVR 5
Published on

ಹಾವೇರಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಸಿ ಹಾಗೂ ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ, ಅವುಗಳ ಪಾಲನೆ ಪೋಷಣೆ ಮಾಡಿ ಬೆಳೆಸುವುದೂ ಅಷ್ಟೇ ಮುಖ್ಯ ಎಂದು ಪರಿಸರವಾದಿ ಮೋಹನ ಹುಲ್ಲತ್ತಿ ಹೇಳಿದರು.
ಜೆಸಿಐ ಹಾವೇರಿ ಘಟಕ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಇಲ್ಲಿನ ನೀಲನಗೌಡ್ರ ನಗರದ ಸಿಲ್ವರ್ ಕ್ರಿಸ್ಟ್ ಬಡಾವಣೆಯ ಉದ್ಯಾನದಲ್ಲಿ ಇತ್ತೀಚೆಗೆ ವಿವಿಧ ಬಗೆಯ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಸಿಐ ಅಧ್ಯಕ್ಷ ಚಂದ್ರಶೇಖರಯ್ಯ ಸುತ್ತೂರಮಠ, ಕಾರ್ಯದರ್ಶಿ ಅಶೋಕ ಹಾಡೋರ, ಪೂರ್ವಾಧ್ಯಕ್ಷ ಕಪಿಲ್ ರಾಠೋಡ, ವೀರಯ್ಯ ಪ್ರಸಾದಿಮಠ, ನಾಗರಾಜ ನಡುವಿನಮಠ, ಪ್ರದೀಪ ಪಾಟೀಲ, ದತ್ತಾತ್ರೇಯ ಜೋಶಿ, ಫಕ್ಕೀರಸ್ವಾಮಿ ಎಸ್.ವಿ., ಹಜ್ಜುಸಾಬ ನದಾಫ್, ಮಹದೇವ ಮಳಲಿ, ಚಂದ್ರಶೇಖರ ಕಾಟೇನಹಳ್ಳಿ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ, ಬಡಾವಣೆ ನಿವಾಸಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net