ಜೆಸಿಐನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ; ಜೆಸಿ ಸಪ್ತಾಹದ ಸಮಾರೋಪ ಸಮಾರಂಭ

JCI
Published on

ಹಾವೇರಿ: ಇಲ್ಲಿನ ರಾಜೇಂದ್ರ ನಗರದ ಜೆಪಿ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಹಾವೇರಿ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆಯ್ದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೆ.9ರಿಂದ 15ರವರೆಗೆ ಹಮ್ಮಿಕೊಂಡಿದ್ದ ಜೆಸಿ ಸಪ್ತಾಹದಲ್ಲಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಶುದ್ಧ ಕುಡಿಯುವ ನೀರಿನ ಟ್ಯಾಂಕ್ ದೇಣಿಗೆ, ಸಸಿ ನೆಡುವ ಕಾರ್ಯಕ್ರಮ, ಬಡ ಮಕ್ಕಳಿಗೆ ಆಹಾರ ಕಿಟ್ ವತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಿದ್ದಲಿಂಗಪ್ಪ ಮೆಣಸಿನಾಳ ಅವರಿಗೆ ಕಮಲ ಪತ್ರ ಪ್ರಶಸ್ತಿ, ಉದ್ಯಮಿಗಳಾದ ಪ್ರಕಾಶ ಶೆಟ್ಟಿ ಹಾಗೂ ತೌಸೀಫ್ ಬಳಿಗಾರ ಅವರಿಗೆ ತೊಬಿಪ್ ಪ್ರಶಸ್ತಿ ಹಾಗೂ ದತ್ತಾತ್ರೇಯ ಜೋಶಿ ಅವರಿಗೆ ಔಟ್ ಸ್ಟಾೃಂಡಿಂಗ್ ಪರ್ಸನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಅಧ್ಯಕ್ಷ ಚಂದ್ರಶೇಖರ ಸುತ್ತೂರಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಕಪಿಲ್ ರಾಠೋಡ, ವಲಯದ ಕಾರ್ಯನಿರ್ವಾಹಕ ಅಧಿಕಾರಿ ಫಕ್ಕೀರಸ್ವಾಮಿ.ಎಸ್.ವಿ, ರುಸ್ತುಂ ನಂದಿಹಳ್ಳಿ, ಎಸ್.ಬಿ.ದೊಡ್ಡಮನಿ, ವೀರಯ್ಯ ಪ್ರಸಾದಿಮಠ, ಸುರೇಶ ಕಡಕೋಳ, ಎಸ್.ಸಿ.ಹಿರೇಮಠ, ಕೃಷ್ಣ ಮಂಗಳೂರ, ವಿರುಪಾಕ್ಷ ಹಾಲಪ್ಪನವರ, ನಾಗರಾಜ ನಡುವಿನಮಠ, ಜಗದೀಶ ಚೌಟಗಿ, ಮಲ್ಲಿಕಾರ್ಜುನ ಶಾಂತಗಿರಿ, ರಾಜು ಚೌಶೆಟ್ಟಿ, ಮುರಗೇಶ ಹುಂಬಿ, ಪ್ರದೀಪ ಪಾಟೀಲ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net