

ಹಾವೇರಿ: ಗುತ್ತಿಗೆದಾರನ ನಿರ್ಲಕ್ಷೃದಿಂದ ಇಲ್ಲಿನ ಜಯದೇವನಗರ 1ನೇ ಕ್ರಾಸ್‌ನಲ್ಲಿ ನಗರಸಭೆ ವತಿಯಿಂದ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸುಸಜ್ಜಿತವಾಗಿದ್ದ ಘಟಕಕ್ಕೆ ಬೀಗ ಜಡಿಯಲಾಗಿತ್ತು. ಮಾ.19ರಂದು ‘ಸುಸಜ್ಜಿತ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಅಯ್ಯೋ ಪ್ರಾಬ್ಲಂ ಕಣ್ರೀ ಅಂಕಣ ಪ್ರಕಟಿಸಿದ ಮೂರು ದಿನದಲ್ಲಿ ಘಟಕ ಪುನಾರಂಭಗೊಂಡಿದೆ.
14ನೇ ವಾರ್ಡ್ ಜಯದೇವ ನಗರದಲ್ಲಿ ಕಳೆದ ಆರು ತಿಂಗಳ ಹಿಂದೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯ ಹೊಣೆಯನ್ನು ಚನ್ನವೀರಸ್ವಾಮಿ ಹಿರೇಮಠ ಅವರಿಗೆ ವಹಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲದಿದ್ದರೂ ಎರಡು ವಾರದಿಂದ ಘಟಕಕ್ಕೆ ಬೀಗ ಹಾಕಿದ್ದರು ಎಂದು ಸ್ಥಳೀಯರು ಆರೋಪಿಸಿದ್ದರು. ವರದಿ ಬಳಿಕ ಘಟಕದಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಿಸಿ, ಆರಂಭಿಸಲಾಗಿದೆ ಎಂದು ಹಿರೇಮಠ ತಿಳಿಸಿದ್ದಾರೆ.