ಅರ್ಚಕರ ಪ್ರಭಾವದಿಂದ ಶಿಲೆ ಶಂಕರತ್ವ ಪಡೆಯಲು ಸಾಧ್ಯ; ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ

3 HVR 5
Published on

ಹಾವೇರಿ: ‘ಅರ್ಚಕಸ್ಯ ಪ್ರಭಾವವೇನ ಶಿಲಾಭವತಿ ಶಂಕರಃ’ ಎಂಬಂತೆ ಅರ್ಚಕರ ಪ್ರಭಾವದಿಂದ ಶಿಲೆಯು ಶಂಕರತ್ವ ಪಡೆಯಲು ಸಾಧ್ಯ ಎಂದು ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನಡುವಿನ ಮಠ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಹಾವೇರಿ ಜಿಲ್ಲಾ ಜಂಗಮ, ಅರ್ಚಕರ ಧಾರ್ಮಿಕ ಸೇವಾ ಸಮಿತಿಯ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗೌರಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಣ್ಣದ ಮಠದ ಶ್ರೀ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೆರೂರಿನ ಶ್ರೀ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ವೇ.ಮೂ. ಗುರುಶಾಂತಯ್ಯ ಶಾಸ್ತ್ರಿ, ಅಧ್ಯಕ್ಷ ವೇ.ಮೂ. ವೀರಭದ್ರಯ್ಯ ಶಾಸ್ತ್ರಿ, ಉಪಾಧ್ಯಕ್ಷ ವೇ.ಮೂ. ಸಂಗಯ್ಯ ಶಾಸ್ತ್ರಿ, ಕಾರ್ಯದರ್ಶಿ ವೇ.ಮೂ. ವೀರಭದ್ರಯ್ಯ ಶಾಸ್ತ್ರಿ, ಸಹಕಾರ್ಯದರ್ಶಿ ವೇ.ಶಿದ್ದಲಿಂಗಯ್ಯ ಶಾಸ್ತ್ರಿ, ಖಜಾಂಚಿ ವೇ.ಮೂ. ಕೊಟ್ರಯ್ಯ ಶಾಸ್ತ್ರಿ, ನಿರ್ದೇಶಕರಾದ ವೇ.ಮೂ. ನಾಗಭೂಷಣ ಶಾಸ್ತ್ರಿ, ವೇ.ಮೂ. ಕುಮಾರ ಶಾಸ್ತ್ರಿ, ವೇ.ಮೂ. ಫಕ್ಕೀರಯ್ಯ ಶಾಸ್ತ್ರಿ, ವೇ.ಮೂ. ಚಂದ್ರಯ್ಯ ಶಾಸ್ತ್ರಿ ಹಾಗೂ ಇತರರು ಭಾಗವಹಿಸಿದ್ದರು.

ಶಾಸ್ತ್ರಿ ಬಳಗದವರು ವೇದಘೋಷ ನೆರವೇರಿಸಿದರು. ಕಲಾವಿದರಾದ ಇಂದ್ರಯ್ಯ ಹಾಗೂ ಬಸಯ್ಯ ಪ್ರಾರ್ಥಿಸಿದರು. ಕುಮಾರ ಶಾಸ್ತ್ರಿ ಸ್ವಾಗತಿಸಿದರು, ವೀರಭದ್ರಯ್ಯ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿದ್ದಲಿಂಗಯ್ಯ ಶಾಸ್ತ್ರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net